Latest Posts

ಮೋದಿಯ ಗಡ್ಡ ಆರು ವರ್ಷಗಳಲ್ಲಿ ದೇಶದಲ್ಲಿ ಕಂಡುಬಂದ ಏಕೈಕ ಬೆಳವಣಿಗೆಯಾಗಿದೆ – ಶಶಿ ತರೂರ್

ಕೇರಳ: ಆರು ವರ್ಷಗಳಲ್ಲಿ ದೇಶದಲ್ಲಿ ಕಂಡುಬಂದ ಏಕೈಕ ಬೆಳವಣಿಗೆ ಮೋದಿಯ ಗಡ್ಡ ಎಂದು ಶಶಿ ತರೂರ್ ವ್ಯಂಗ್ಯವಾಡಿದ್ದಾರೆ. ಶಶಿತರೂರ್ ಸಂಸದರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ ‘ಕಳೆದ ಆರು ವರ್ಷಗಳಲ್ಲಿ ದೇಶದಲ್ಲಿ ಕಂಡುಬಂದಿರುವ ಏಕೈಕ ಬೆಳವಣಿಗೆ’ ಎಂಬ ಶೀರ್ಷಿಕೆಯೊಂದಿಗೆ ಟ್ವಿಟ್ಟರ್ ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ.ಇದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಇಂದು ಬೆಳಿಗ್ಗೆ ಸಿಕ್ಕಿದ್ದು ಅರ್ಥಪೂರ್ಣವಾಗಿ ಚಿತ್ರೀಕರಿಸಲಾಗಿದೆ’ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.ಪ್ರಶ್ನೆಗಳು ಮತ್ತು ಉತ್ತರಗಳಿಗೆ ಹೆದರುವ ಸರ್ಕಾರವು ಕೇಂದ್ರವನ್ನು ಆಳುತ್ತಿದೆ.ಮೋದಿಯವರು ತಮ್ಮ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಯಾವುದೇ ಪತ್ರಿಕಾಗೋಷ್ಠಿ ನಡೆಸಲಿಲ್ಲ ಮತ್ತು ಮೊದಲೇ ವ್ಯವಸ್ಥೆ ಮಾಡಿದ ಸಂದರ್ಶನಗಳನ್ನು ಮಾತ್ರ ನೀಡಿದ್ದಾರೆ ಎಂದು ಶಶಿ ತರೂರ್ ಈ ಹಿಂದೆ ಟ್ವಿಟ್ಟರ್ ನಲ್ಲಿ ಟೀಕಿಸಿದ್ದರು.

Share this on:
error: Content is protected !!