ರಿಯಾದ್: ಸೌದಿ ಅರೇಬಿಯಾದ ಮಕ್ಕಾ ಪ್ರಾಂತ್ಯದ ತಾಯಿಫ್ ಗವರ್ನರೇಟ್ನಲ್ಲಿರುವ ಜಬಲ್ ಅಮಾದಿ ಪರ್ವತದ ಮೇಲೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸಲು ಪ್ರಯತ್ನಗಳು ನಡೆಯುತ್ತಿವೆ. ಸೌದಿ ಸಿವಿಲ್ ಡಿಫೆನ್ಸ್ ಸ್ವತಃ ವರದಿಯನ್ನು ಬಿಡುಗಡೆ ಮಾಡಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ. ಮಕ್ಕಾದ ಗವರ್ನರೇಟ್ ನ ಸೋಶಿಯಲ್ ಮೀಡಿಯಾ ಖಾತೆಯು ಪರ್ವತದ ಮೇಲೆ ಮರಗಳು ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದೆ.