Latest Posts

ಈ ಬಾರಿ ಸಿವಿಲ್ ಸರ್ವಿಸ್ ಪ್ರವೇಶ ಪಡೆದವರಲ್ಲಿ ಅರವತ್ತೊಂದು ಶೇಕಡಾ ಆರ್‌ಎಸ್‌ಎಸ್ ಹಿನ್ನೆಲೆ ಇರುವವರು – ವರದಿ

ನವದೆಹಲಿ: ಈ ಬಾರಿ ಸಿವಿಲ್ ಸರ್ವಿಸ್ ನಲ್ಲಿ ಪ್ರವೇಶ ಪಡೆದ ಹೆಚ್ಚಿನವರು ಆರ್‌ಎಸ್‌ಎಸ್ ಬೆಂಬಲಿತ ಸಂಕಲ್ಪ ಫೌಂಡೇಶನ್‌ನಲ್ಲಿ ತರಬೇತಿ ಪಡೆದವರು ಎಂದು ವರದಿಯಾಗಿದೆ.ನಾಗರಿಕ ಸೇವೆಯಲ್ಲಿರುವವರಲ್ಲಿ ಅರವತ್ತಕ್ಕೂ ಹೆಚ್ಚು ಮಂದಿ ಸಂಕಲ್ಪ ಫೌಂಡೇಶನ್‌ನವರು. ಮುಸ್ಲಿಂ ಜನಸಂಖ್ಯೆಯ 14% ರಲ್ಲಿ, ಕೇವಲ 5% ಜನರಿಗೆ ಮಾತ್ರ ಪ್ರವೇಶ ನೀಡಲಾಗಿದೆ.ದೇಶದಲ್ಲಿ ಯುಪಿಎಸ್ಸಿ ಜಿಹಾದ್ ನಡೆಯುತ್ತಿದೆ ಎಂಬ ಸಂಘಪರಿವಾರ ಮಾಧ್ಯಮದ ಅಪಪ್ರಚಾರದ ನಡುವೆ ಈ ಆಘಾತಕಾರಿ ಅಂಕಿ ಅಂಶಗಳು ಬಂದಿವೆ.

ಈ ಬಾರಿ ಪ್ರವೇಶ ಪಡೆದ 828 ಜನರಲ್ಲಿ 476 ಮಂದಿ ಅಂದರೆ 61% ಆರ್‌ಎಸ್ಸೆಸ್ ಬೆಂಬಲಿತ ಸಂಕಲ್ಪ ಪೌಂಡೇಶನ್ ನಿಂದ ತೇರ್ಗಡೆಯಾಗಿದ್ದಾರೆ.ಸಂಸ್ಥೆಯೇ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ. ಸಿವಿಲ್ ಸರ್ವಿಸ್ ಗೆ ತೇರ್ಗಡೆಗೊಂಡ ಸಂಸ್ಥೆಯ ವಿದ್ಯಾರ್ಥಿಗಳನ್ನು ಗೌರವಿಸುವ ಸಲುವಾಗಿ ಪ್ರತಿಷ್ಠಾನವು ಗೌರವ ಸಮಾರಂಭವನ್ನು ನಡೆಸಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ನಾಗಾಲ್ಯಾಂಡ್ ಗವರ್ನರ್ ಎನ್ ರವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದೇಶದಲ್ಲಿ ಯುಪಿಎಸ್ಸಿ ಜಿಹಾದ್ ನಡೆಸಲಾಗುತ್ತದೆ ಎಂದು ದ್ವೇಷ ಹರಡಿದ ಸಂಘಪರಿವಾರ ಪರ ಮಾಧ್ಯಮ ಸುದರ್ಶನ್ ಟಿವಿ ವಿರುದ್ಧ ಸುಪ್ರೀಂ ಕೋರ್ಟ್ ದೂರನ್ನು ಕೈಗೆತ್ತಿಕೊಂಡಿತ್ತು.

Share this on:
error: Content is protected !!