ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ಗೆ ಸಂಬಂಧಿಸಿದ ನಕಲಿ ಟ್ವೀಟ್ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿಯು ನ್ಯೂಸ್ ಚಾನೆಲ್ ಆಜ್ ತಕ್ ಗೆ 1 ಲಕ್ಷ ರೂ.ಗಳ ದಂಡ ವಿಧಿಸಿದೆ ಎಂದು ಲೈವ್ ಲಾ ಗುರುವಾರ ವರದಿ ಮಾಡಿದೆ. ದಂಡದ ಜೊತೆಗೆ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚನೆಯನ್ನೂ ಪ್ರಸಾರ ಮಾಡಬೇಕೆಂದು ಸೂಚಿಸಿದೆ.
ಸುಶಾಂತ್ ಅವರ ಮೃತದೇಹದ ಚಿತ್ರಗಳನ್ನು ಪ್ರಸಾರ ಮಾಡಿ ನಿಯಮಾವಳಿಗಳನ್ನು ಉಲ್ಲಂಘಿಸಿದ ‘ಇಂಡಿಯಾ ಟಿವಿ’ ನ್ಯೂಸ್ ಕೂಡ ಕ್ಷಮೆಯಾಚಿಸಬೇಕು ಎಂದು NBSA ಹೇಳಿದೆ. ‘ಝೀ ನ್ಯೂಸ್’ ಹಾಗೂ ‘ನ್ಯೂಸ್ 24’ಗೆ ಕೂಡ ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯಾಚಿಸಲು ಸೂಚಿಸಲಾಗಿದ್ದು ಎಬಿಪಿ ನ್ಯೂಸ್ ನಟನ ದೇಹದ ಕ್ಲೋಸ್ ಅಪ್ ಫೋಟೋಗಳನ್ನು ತೋರಿಸಿಲ್ಲ ಎಂಬ ಕಾರಣಕ್ಕೆ ಎಬಿಪಿ ವಾಹಿನಿಗೆ ಬರೀ ಎಚ್ಚರಿಕೆ ನೀಡಲಾಗಿದೆ.