Latest Posts

8,400 ಕೋಟಿಯ ವಿಮಾನ ಖರೀದಿಸುವ ಬದಲು ಸೈನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಬಹುದಲ್ಲವೇ? ರಾಹುಲ್ ಕಿಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 8,000 ಕೋಟಿ ರೂ.ಗಳ ಐಷಾರಾಮಿ ವಿಮಾನವನ್ನು ಖರೀದಿಸುವ ವಿಷಯವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.ಟ್ಯಾಕ್ಟರ್ ರ‌್ಯಾಲಿಯಲ್ಲಿ ಕುಶನ್ ಮೇಲೆ ಕುಳಿತದ್ದನ್ನು ಪ್ರಶ್ನೆ ಮಾಡಿದ ವರದಿಗಾರನಿಗೆ ಕಡಕ್ ಉತ್ತರವನ್ನು ನೀಡಿದ್ದಾರೆ.

‘ಪ್ರಧಾನಿ ತಮ್ಮ ಸ್ವಂತ ಅವಶ್ಯಕತೆಗಾಗಿ 8400 ಕೋಟಿ ರೂ. ವಿಮಾನ ಖರೀದಿ ಮಾಡಿದರು. ಈ ಹಣದಿಂದ ಸಿಯಾಚಿನ್-ಲಡಾಖ್ ಗಡಿಯಲ್ಲಿ ಕಾವಲು ಕಾಯುತ್ತಿರುವ ನಮ್ಮ ಸೈನಿಕರಿಗೆ ಈ ಹಣದಿಂದ ಏನಾದರೂ ಖರೀದಿಸಬಹುದಿತ್ತಲ್ಲವೇ ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು

ಉಣ್ಣೆ ಬಟ್ಟೆ: 30,00,000,
ಜಾಕೆಟ್‌ಗಳು ಮತ್ತು ಕೈಗವಸುಗಳು: 60,00,000,
ಶೂಗಳು: 67,20,000
ಆಕ್ಸಿಜನ್ ಸಿಲಿಂಡರ್‌ಗಳು: 16,80,000 ಇನ್ನಿತರ ಹಲವಾರು ವಸ್ತುಗಳನ್ನು ಗಡಿ ಕಾಯುವ ಸೈನಿಕರಿಗೆ ಸೌಕರ್ಯಗಳನ್ನು ಏರ್ಪಡಿಸಬಹುದಿತ್ತು ಎಂದಿದ್ದಾರೆ.

“ಪ್ರಧಾನಿ ಯಾವಾಗಲೂ ನಮ್ಮ ಸೈನಿಕರ ಬಗ್ಗೆ ಚಿಂತಿಸದೆ ಸ್ವಂತದ ಬಗ್ಗೆ ಮಾತ್ರ ಯೋಚಿಸುತ್ತಾರೆ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.”

ರೈತರ ರ‍್ಯಾಲಿಯ ಸಂದರ್ಭದಲ್ಲಿ ಟ್ರಾಕ್ಟರ್‌ನಲ್ಲಿ ಕುಶನ್ (ಸೋಫ ಕುರ್ಚಿ) ಬಳಸಿದ್ದಕ್ಕಾಗಿ ಬಿಜೆಪಿಯವರು ಟೀಕಿಸಿದ್ದಕ್ಕಾಗಿ ರಾಹುಲ್ ಗಾಂಧಿ ನಿನ್ನೆ ಬಿಜೆಪಿ ಮುಖಂಡರಿಗೆ ಪ್ರತ್ಯುತ್ತರ ನೀಡಿದರು. 8,000 ಕೋಟಿ ರೂ.ಗಳ ವಿಮಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಹಾರಿಸುವುದನ್ನು ಯಾರೂ ನೋಡುವುದಿಲ್ಲ ಆದರೆ ರೈತರ ರ‍್ಯಾಲಿಯಲ್ಲಿ ಕುಶನ್ ಇತ್ತೆಂದು ಎಲ್ಲರಿಗೂ ಕಾಣುತ್ತಿದೆ ಎಂದು ರಾಹುಲ್ ಟೀಕಿಸಿದರು.

ಟ್ರಾಕ್ಟರ್‌ನಲ್ಲಿ ಕುಶನ್ ಮೇಲೆ ಕುಳಿತುಕೊಂಡ ಬಗ್ಗೆ ಪ್ರಶ್ನೆ ಕೇಳಿದ ವರದಿಗಾರನಿಗೆ ” ದೊಡ್ಡ ಮೊತ್ತ ಕೊಟ್ಟು ವಿಮಾನ ಖರೀದಿಸಿದವರಲ್ಲಿ ಯಾಕೆ ಇಂತಹ ಪ್ರಶ್ನೆಗಳನ್ನು ಕೇಳಲಿಲ್ಲ ಎಂದು ರಾಹುಲ್ ಕೇಳಿದರು. ಇಷ್ಟು ದೊಡ್ಡ ಮೊತ್ತಕ್ಕೆ ವಿ.ವಿ.ಐ.ಪಿ. ಬೋಯಿಂಗ್ 777 ಖರೀದಿಯನ್ನು ಯಾರೂ ನೋಡಿಲ್ಲವೇ ಅಥವಾ ಪ್ರಶ್ನಿಸಿರುವುದು ಅಸಾಮಾನ್ಯವಾಗಿದೆಯೇ ಎಂದು ರಾಹುಲ್ ಕೇಳಿದರು.

Share this on:
error: Content is protected !!