ಮುಂಬೈ: ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಪ್ರಮುಖ ದೂರದರ್ಶನ ಚಾನೆಲ್ಗಳು ನಕಲಿ ಟಿಆರ್ಪಿ ಆರೋಪವನ್ನು ಎದುರಿಸುತ್ತಿದೆ.ರೇಟಿಂಗ್ ವಂಚನೆಯ ವಿರುದ್ಧ ಜಾಹೀರಾತುದಾರರ ಕಂಪನಿಗಳು ಕ್ರಮ ತೆಗೆದುಕೊಳ್ಳುತ್ತಿವೆ.ಮುಂಬೈ ಪೊಲೀಸರ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಆಪಾದಿತ ಚಾನೆಲ್ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಪ್ರಮುಖ ಬಿಸ್ಕತ್ತು ತಯಾರಕ ಕಂಪೆನಿ ಪಾರ್ಲೆ ಸ್ಪಷ್ಟಪಡಿಸಿದ್ದಾರೆ.ದ
ಧ್ವೇಷಕಾರುವ ಮತ್ತು ಸುಳ್ಳು ವಿಷಯವನ್ನು ಪ್ರಸಾರ ಮಾಡುವ ಚಾನೆಲ್ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಪಾರ್ಲೆ ಹಿರಿಯ ಮುಖ್ಯಸ್ಥ ಕೃಷ್ಣ ರಾವ್ ಬುದ್ಧ ಲೈವ್ ಮಿಂಟ್ ವೆಬ್ಸೈಟ್ಗೆ ತಿಳಿಸಿದ್ದಾರೆ.
ಈ ಹಿಂದೆ ವಾಹನ ತಯಾರಕ ಕಂಪನಿ ಬಜಾಜ್ ಆಟೋಸ್ ಮೂರು ಆಪಾದಿತ ಚಾನೆಲ್ಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ ಮತ್ತು ಇನ್ನು ಮುಂದೆ ಜಾಹೀರಾತು ನೀಡುವುದಿಲ್ಲ ಎಂದು ಘೋಷಿಸಿದೆ.ರಿಪಬ್ಲಿಕ್ ಟಿವಿ, ಫ್ಯಾಕ್ಟ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ವಿರುದ್ಧ ನಕಲಿ ಟಿಆರ್ಪಿ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಯಲ್ಲಿ ಅರ್ನಾಬ್ ಗೋಸ್ವಾಮಿಯನ್ನು ಪ್ರಶ್ನಿಸಲು ಮುಂಬೈ ಪೊಲೀಸರು ನಿರ್ಧರಿಸಿದ್ದರು.