Latest Posts

ಓಮಾನಿನಲ್ಲಿ ಇಂದಿನಿಂದ ಮತ್ತೆ ಲಾಕ್ ಡೌನ್ !!

ಮಸ್ಕತ್: ಕೋವಿಡ್ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಟೋಬರ್ 11 ರಿಂದ 24 ರವರೆಗೆ ರಾತ್ರಿ ನಿಷೇಧ ವನ್ನು ಹೇರಳಾಗಿದೆ.ಕರ್ಫ್ಯೂ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ. ಈ ಸಮಯದಲ್ಲಿ ಎಲ್ಲಾ ಅಂಗಡಿಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗುವುದು ಎಂದು ಒಮನ್ ಟಿವಿ ಹೇಳಿದೆ.

ಮುಂದಿನ ಸೂಚನೆ ಬರುವವರೆಗೂ ಕಡಲತೀರಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.ಈ ಹಿಂದೆ ತೆರೆದಿರುವ ಕೆಲವು ಪ್ರದೇಶಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಕೋವಿಡ್ ವಿರುದ್ಧ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕೆಂದು ಸುಪ್ರೀಂ ಸಮಿತಿ ಎಲ್ಲರಿಗೂ ಕರೆ ನೀಡಿತು.ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

Share this on:
error: Content is protected !!