Latest Posts

ಹತ್ರಾಸ್ ದಲಿತ ಹುಡುಗಿಯ ಮನೆಗೆ ಭೇಟಿ ನೀಡಿದ ಮುಸ್ಲಿಂ ಲೀಗ್

ಉತ್ತರ ಪ್ರದೇಶ: ಜಾತಿ ಮತಾಂಧರಿಂದ ಕ್ರೂರವಾಗಿ ಹಿಂಸೆಗೆ ಒಳಗಾಗಿ ಮರಣ ಹೊಂದಿದ ಉತ್ತರ ಪ್ರದೇಶದ ಹತ್ರಾಸ್ ದಲಿತ ಹೆಣ್ಣುಮಗಳ ಕುಟುಂಬವನ್ನು ಮುಸ್ಲಿಂ ಲೀಗ್ ನಿಯೋಗ ಭೇಟಿ ಮಾಡಿದೆ. ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಕಾರ್ಯದರ್ಶಿ ಕುರಮ್ ಅನೀಸ್ ಉಮರ್ ನೇತೃತ್ವದಲ್ಲಿ ರಾಷ್ಟ್ರೀಯ ನಿಯೋಗವು ಹತ್ರಾಸ್‌ಗೆ ಭೇಟಿ ನೀಡಿತು. ಹತ್ರಾಸ್ ಬಾಲಕಿಗೆ ನ್ಯಾಯ ದೊರಕಿಸಿಕೊಡುವಂತೆ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಸಮಿತಿ ನೇತೃತ್ವದ ಆಂದೋಲನದ ಭಾಗವಾಗಿ ಈ ತಂಡ ಹತ್ರಾಸ್‌ ಬೇಟಿ ನೀಡಿದೆ.ಈ ಸಂದರ್ಭದಲ್ಲಿ ಸಂಸದ ಇಟಿ ಮುಹಮ್ಮದ್ ಬಶೀರ್ ಬಾಲಕಿಯ ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದರು.

ಹತ್ರಾಸ್ ಹುಡುಗಿಯ ತಂದೆ ಮತ್ತು ಸಹೋದರರು ಮುಸ್ಲಿಂ ಲೀಗ್ ನಿಯೋಗದೊಂದಿಗೆ ಮಾತನಾಡಿದರು. ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಮುಸ್ಲಿಂ ಲೀಗ್ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ನಾಯಕರು ಕುಟುಂಬಕ್ಕೆ ಭರವಸೆಯನ್ನು ನೀಡಿದರು. ಗ್ರಾಮದ ಪ್ರವೇಶದ್ವಾರದಲ್ಲಿ ಪೊಲೀಸರು ಲೀಗನ್ನು ತಡೆದಿದ್ದರು. ದೀರ್ಘ ಸಮಯ ಚರ್ಚಿಸಿದ ನಂತರ ಕುಟುಂಬವನ್ನು ಭೇಟಿ ಮಾಡಲು ಅನುಮತಿ ನೀಡಲಾಯಿತು.

ಹಳ್ಳಿಯಿಂದ ಎರಡು ಕಿಲೋಮೀಟರ್ ನಡೆದುಕೊಂಡಾಗಿದೆ ಹುಡುಗಿಯ ಮನೆಗೆ ತಲುಪಿದ್ದು. ರಾಷ್ಟ್ರೀಯ ಕಾರ್ಯದರ್ಶಿ ಕುರಾಮ್ ಅನೀಸ್ ಉಮರ್, ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಕೆ. ಝುಬೈರ್ , ಎಂ.ಎಸ್.ಎಫ್ ರಾಷ್ಟ್ರೀಯ ಅಧ್ಯಕ್ಷ ಟಿ.ಪಿ.ಅಶ್ರಫಲಿ, ಯೂತ್ ಲೀಗ್-ಎಂ.ಎಸ್.ಎಫ್ ಪದಾಧಿಕಾರಿಗಳಾದ ಅಡ್ವಕೇಟ್.ಫೈಸಲ್ ಬಾಬು, ಶಿಬು ಮೀರನ್, ಇ. ಶಮೀರ್ ಅಹ್ಮದ್ ಸಾಜು, ಮುಹಮ್ಮದ್ ಝುಬೈರ್, ಮುಹಮ್ಮದ್ ಆರಿಫ್ ಮತ್ತು ಅರ್ಷದ್ ಮುನ್ನಾ ನಿಯೋಗದಲ್ಲಿ ಇದ್ದರು.

Share this on:
error: Content is protected !!