Latest Posts

ಕೋವಿಡ್ ಮಾರ್ಗದರ್ಶನ ನೀಡಲು ವಿಫಲ;ಕ್ಷಮೆ ಕೇಳಿ ಕಣ್ಣೀರಿಟ್ಟ ಸರ್ವಾಧಿಕಾರಿ ಕಿಮ್

ಸಿಯೋಲ್‌: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಕೋವಿಡ್‌ ಕೊರೊನಾ ಸೋಂಕಿನ ಅವಧಿಯಲ್ಲಿ ದೇಶವಾಸಿಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡಲು ತಾವು ವಿಫ‌ಲವಾಗಿದ್ದಕ್ಕೆ ಕ್ಷಮಾಪಣೆ ಕೋರಿದ್ದಾರೆ. ಇದಷ್ಟೇ ಅಲ್ಲದೇ, ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ!

ಇತ್ತೀಚೆಗೆ ನಡೆದ ತಮ್ಮ ಪಕ್ಷದ 75 ಸಂಸ್ಥಾಪನಾ ದಿನೋತ್ಸವದ ಆಚರಣೆಯ ವೇಳೆ ಮಿಲಿಟರಿ ಪರೇಡ್‌ ಅನ್ನು ಉದ್ದೇಶಿಸಿ ಮಾತನಾಡಿದ ಕಿಮ್‌ ಜಾಂಗ್‌ ಉನ್‌, ‘ಜನರು ನಮ್ಮ ಮೇಲೆ ಆಕಾಶದಷ್ಟು ಎತ್ತರ, ಸಾಗರದಷ್ಟು ಆಳವಾದ ನಂಬಿಕೆಯನ್ನು ಇಟ್ಟಿದ್ದರು. ಆದರೆ, ಅವರ ನಂಬಿಕೆಗೆ ತಕ್ಕಂತೆ ಕಾರ್ಯನಿರ್ವಹಿಸಲು ನಾನು ವಿಫ‌ಲನಾಗಿದ್ದೇನೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ’ ಎಂದು ಭಾವುಕರಾಗಿ ನುಡಿದಿದ್ದಾರೆ.

ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಕಿಮ್‌ ಜಾಂಗ್‌ ಉನ್‌ ಕೆಲ ತಿಂಗಳ ಹಿಂದೆ ತೀವ್ರವಾಗಿ ಆಸ್ವಸ್ಥಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೆಲವು ಸುದ್ದಿ ಮಾಧ್ಯಮಗಳಂತೂ ಕಿಮ್‌ ಜಾಂಗ್‌ ಉನ್‌ ಮೃತಪಟ್ಟಿದ್ದಾರೆ ಎಂದೇ ವರದಿ ಮಾಡಿದ್ದವು. ಈ ಸುದ್ದಿ ಹರಡಿದ ಕೆಲವೇ ದಿನಗಳಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಅನುಮಾನಗಳಿಗೆ ತೆರೆ ಎಳೆದಿದ್ದರು. ಉತ್ತರ ಕೊರಿಯಾದಲ್ಲಿ ಕೋವಿಡ್‌ ಯಾವ ಪ್ರಮಾಣದಲ್ಲಿ ಹರಡಿದೆ ಎನ್ನುವ ವಿಚಾರವನ್ನು ಈಗಲೂ ಗೌಪ್ಯವಾಗಿಯೇ ಇಡಲಾಗಿದೆ.ಆದರೆ ಇವರ ಈ ಮಾತು ಹಲವು ಸಂಶಯಕ್ಕೆ ಕಾರಣವಾಗಿದೆ.

Share this on:
error: Content is protected !!