ನವದೆಹಲಿ: ಸಿನಿಮಾ ಇಂಡಸ್ಟ್ರಿ ವಿರುದ್ಧ ಅವಮಾನಕರವಾದ ಪರಾಮರ್ಶೆಯನ್ನು ನಡೆಸಬಾರದೆಂದು,ಪ್ರಸಾರ ಮಾಡಬಾರದೆಂದು ಸೂಚಿಸಿ ದೆಹಲಿ ಹೈಕೋರ್ಟ್ನಲ್ಲಿ ನಾಲ್ಕು ಬಾಲಿವುಡ್ ಅಸೋಸಿಯೇಷನ್,ಅಮೀರ್ ಖಾನ್, ಶಾರುಖ್ ಖಾನ್ ಸೇರಿದಂತೆ 34 ನಟರು ರಿಪಬ್ಲಿಕ್ ಟಿವಿ, ಅರ್ನಾಬ್ ಗೋಸ್ವಾಮಿ, ಪ್ರದೀಪ್ ಭಂಡಾರಿ, ರಾಹುಲ್ ಶಿವಶಂಕರ್ ಮತ್ತು ನವಿಕ ಕುಮಾರ್ (ಟೈಮ್ಸ್ ನೌ) ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.
ಬಾಲಿವುಡ್ ತಾರೆಯರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡಬಾರದು ಮತ್ತು ಅವರ ವಿರುದ್ಧ ಮಾಧ್ಯಮ ವಿಚಾರಣೆ ನಡೆಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅರ್ಜಿಯಲ್ಲಿ ನಟರು ಮತ್ತು ಇತರರ ಗೌಪ್ಯತೆಯ ಹಕ್ಕಿನ ಬಗ್ಗೆ ಸಂಯಮ ಪಾಲಿಸಬೇಕೆಂದು ತಿಳಿಸಿದ್ದಾರೆ .
ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮಗಳು, 1994 ರ ಕಾರ್ಯಕ್ರಮದ ಮಾನದಂಡಗಳನ್ನು ಚಾನೆಲ್ಗಳು ಅನುಸರಿಸುತ್ತವೆಯೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಬಾಲಿವುಡ್ ವಿರುದ್ಧ ಪ್ರಕಟವಾದ ಎಲ್ಲಾ ಮಾನಹಾನಿಕರ ವಿಷಯವನ್ನು ಹಿಂಪಡೆಯಲು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.