ನವದೆಹಲಿ: ಭಾರತ-ಚೀನಾ ಗಡಿ ವಿವಾದ ಕುರಿತ ಮಾತುಕತೆ ಫಲಪ್ರದವಾಗುತ್ತಿದೆ ಅಂತಾ ನಿನ್ನೆಯಷ್ಟೇ ಉಭಯ ದೇಶಗಳು ಹೇಳಿಕೆ ನೀಡಿದ ಬೆನ್ನಲ್ಲೇ ಯುದ್ಧದ ಭೀತಿ ಕೇಳಿಬರುತ್ತಿದೆ.ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿಯಾಗಲಿದೆ. ಚೀನಾ ಕಾಲ್ಕೆರೆದು ಯುದ್ಧಕ್ಕೆ ನಿಲ್ಲುವ ಸಂಭವ ಇದ್ದು ಚೀನಾ ಸೇನೆಗೆ ಯುದ್ಧಕ್ಕೆ ಸಿದ್ಧರಾಗಿ ಎಂದು ಅಧ್ಯಕ್ಷ ಶಿ ಜಿನ್ ಪಿಂಗ್ ಕರೆ ನೀಡಿದ್ದಾರೆ.
ಚೀನಾದ ಪ್ರಮುಖ ಪತ್ರಿಕೆ ಕ್ಸಿನುವಾ ಈ ಸಂಬಂಧಿಸಿದ ವರದಿಯನ್ನ ಮಾಡಿದೆ ಎಂದು ಸಿಎನ್ಎನ್ ನ್ಯೂಸ್ ಹೇಳಿದೆ. ಶಿ ಜಿನ್ ಪಿಂಗ್ ನಿನ್ನೆ ಗುವಾಂಗ್ಡಾಂಗ್ನಲ್ಲಿರುವ ಮಿಲಿಟರಿ ನೆಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮ್ಮ ಸೈನಿಕರಿಗೆ ನಿಮ್ಮ ಮನಸ್ಸು ಮತ್ತು ಶಕ್ತಿಯನ್ನ ಯುದ್ಧಕ್ಕೆ ಸಿದ್ಧಪಡಿಸಿಕೊಳ್ಳಿ. ಜೊತೆಗೆ ಹೈ-ಅಲರ್ಟ್ ಆಗಿರಿ. ನಮ್ಮ ಸೈನಿಕರು ಸಂಪೂರ್ಣ ನಿಷ್ಠಾವಂತ, ಸಂಪೂರ್ಣವಾಗಿ ಶುದ್ಧ ಮತ್ತು ಸಂಪೂರ್ಣವಾಗಿ ವಿಶ್ವಾಸಾರ್ಹರು. ನಾವು ಯಾವಾಗ ಬೇಕಾದರೂ ಯುದ್ಧಕ್ಕೆ ಸೂಚನೆ ನೀಡಬಹುದು,ಸಿದ್ದರಿರಿ ಎಂದು ಹೇಳಿದ್ದಾರೆಂದು ರಾಷ್ಟ್ರೀಯ ಮಾಧ್ಯಮ ವರದಿಯನ್ನು ಪ್ರಕಟಿಸಿದೆ.