Latest Posts

ಸೆಲ್ಫಿ ವಿಡಿಯೋ ಮೂಲಕ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಸೆಲ್ಫಿ ವಿಡಿಯೋ ಒಂದನ್ನು ಮಾಡಿ ಮಕ್ಕಳ ಎದುರೇ ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಂದ್ರಾಲೇಔಟ್‌ನ ಅರುಂಧತಿ ನಗರದಲ್ಲಿ ನಡೆದಿದೆ.

30 ವರ್ಷದ ಫಾತಿಮಾ ಎಂಬುವವರು ತಮ್ಮ ಇಬ್ಬರು ಮಕ್ಕಳ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಫಾತಿಮಾ ಅವರು ಕೆಲವು ವರ್ಷದಿಂದ ಗಲ್ಫ್ ದುಬೈ, ಕುವೈತ್ನಲ್ಲಿ ಮನೆಗೆಲಸ‌‌ ಮಾಡುತ್ತಿದ್ದು, ಅಲ್ಲಿ ಗಳಿಸಿದ ಸುಮಾರು 9 ಲಕ್ಷ ರೂ. ಹಣವನ್ನು ಅವರ ಕುಟುಂಬಸ್ಥರಿಗೆ ಕಳಿಸುತ್ತಿದ್ದರು.


ಆದರೆ ಈಗ ತಾನು ಕಳುಹಿಸಿದ್ದ ಹಣ ಕೇಳಿದರೆ ವಾಪಸ್ಸು ನೀಡುತ್ತಿಲ್ಲ ಎಂದು ಆರೋಪಿಸಿ ಫಾತಿಮಾ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ

Share this on:
error: Content is protected !!