Latest Posts

ಸೌದಿ ಅರೇಬಿಯಾ:ಸಾಮಾನ್ಯ ಕೈದಿಗಳಿಗೆ ಕ್ಷಮಾದಾನ ನೀಡಲು ಆದೇಶಿಸಿದ ಕಿಂಗ್ ಸಲ್ಮಾನ್

ರಿಯಾದ್: ದೇಶದಲ್ಲಿ ಜೈಲಿನಲ್ಲಿದ್ದವರಿಗೆ ಕ್ಷಮಾದಾನವನ್ನು ನೀಡಲು ಸೌದಿ ಅರೇಬಿಯಾ ರಾಜ ಸಲ್ಮಾನ್ ಆದೇಶಿಸಿದ್ದಾರೆ.ಇದರ ಭಾಗವಾಗಿ, ರಾಜ ಸಲ್ಮಾನ್ ಘೋಷಿಸಿದ ಕ್ಷಮಾದಾನಕ್ಕೆ ಅರ್ಹರನ್ನು ಬಿಡುಗಡೆ ಮಾಡಲು ಮತ್ತು ಅವರ ಕುಟುಂಬಗಳಿಗೆ ಹಸ್ತಾಂತರ ಮಾಡಲು ಕಾರಾಗೃಹ ಇಲಾಖೆ ಕ್ರಮಗಳನ್ನು ಪ್ರಾರಂಭಿಸಿದೆ.ರಾಜ ಸಲ್ಮಾನ್ ಆದೇಶವನ್ನು ತ್ವರಿತವಾಗಿ ಜಾರಿಗೆ ತರಬೇಕೆಂದು ಗೃಹ ಸಚಿವ ಅಮೀರ್ ಅಬ್ದುಲ್ ಅಜೀಜ್ ಬಿನ್ ಸೌದ್ ನಿರ್ದೇಶನ ನೀಡಿದ್ದಾರೆ ಎಂದು ಕಾರಾಗೃಹ ಮಹಾನಿರ್ದೇಶಕರು ತಿಳಿಸಿದ್ದಾರೆ.

ಕೈದಿಗಳಲ್ಲಿ ಯಾರು ಕ್ಷಮಾದಾನಕ್ಕೆ ಅರ್ಹರು ಎಂಬುದು ಸ್ಪಷ್ಟವಾಗಿಲ್ಲ.ಈ ಕುರಿತು ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬರಬಹುದು.

Share this on:
error: Content is protected !!