ಕೇರಳ: ಕೋವಿಡ್ ಎರಡನೇ ಅಲೆಯನ್ನು ತಡೆಗಟ್ಟಲು ವಿಧಿಸಿದ ಲಾಕ್ಡೌನ್ ನಲ್ಲಿ ಅನೇಕ ವಿಷಯಗಳಿಗೆ ವಿನಾಯಿತಿ ನೀಡಿದರೂ, ಆರಾಧನಾ ಕೇಂದ್ರ ಗಳಾದ ಮಸೀದಿ, ಚರ್ಚ್, ದೇವಸ್ಥಾನ ತೆರೆಯಲು ಅನುಮತಿ ನೀಡದೆ ಇರುವುದು ದುರದೃಷ್ಟಕರ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರಾ ಅಧ್ಯಕ್ಷರಾದ ಸೈಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್ ಹೇಳಿದ್ದಾರೆ.
ಸಮಸ್ತ ಮತ್ತು ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರ ಸಾಮೂಹಿಕ ಬೇಡಿಕೆಯನ್ನು ನಿರ್ಲಕ್ಷಿಸಿರುವುದು ದುರದೃಷ್ಟಕರ. ಸರ್ಕಾರವು ಈ ಸಮಸ್ಯೆಯ ಗಂಭೀರತೆಯನ್ನು ಅರಿತುಕೊಳ್ಳಬೇಕು ಮತ್ತು ಆದಷ್ಟು ಬೇಗ ಮಧ್ಯಪ್ರವೇಶಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.