ಛತ್ತೀಸ್ಘಡ್: ಅಲೋಪತಿ ಔಷಧಿ ಮತ್ತು ವೈದ್ಯರ ವಿರುದ್ಧ ಸುಳ್ಳು ಮಾಹಿತಿ ಹರಡಿದ್ದಕ್ಕಾಗಿ ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಕೊರೋನಾ ಔಷದಿ ಬಗ್ಗೆ ತಪ್ಪುಮಾಹಿತಿ ನೀಡಿದರ ಬಗ್ಗೆ ಛತ್ತೀಸ್ಗಡ ದ ರಾಯ್ಪುರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಛತ್ತೀಸ್ಗಡ ಆಸ್ಪತ್ರೆ ಮಂಡಳಿ ಅಧ್ಯಕ್ಷ ರಾಕೇಶ್ ಗುಪ್ತಾ ಮತ್ತು ಐಎಂಎ ರಾಯಪುರ ಅಧ್ಯಕ್ಷ ವಿಕಾಸ್ ಅಗರ್ವಾಲ್ ಅವರ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.ರಾಮದೇವ್ ಕೋವಿಡ್ ಔಷಧಿಗಳನ್ನು ತಪ್ಪಾಗಿ ನಿರೂಪಿಸಿದ್ದಾರೆ ಮತ್ತು ಅನುಮೋದಿತ ಚಿಕಿತ್ಸಾ ವಿಧಾನಗಳ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿನಲ್ಲಿದೆ.
ಐಪಿಸಿ ಸೆಕ್ಷನ್ 188, 266 ಮತ್ತು 504 ಮತ್ತು ವಿಪತ್ತು ನಿರ್ವಹಣಾ ಖಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.