ಯುಎಇ: ಸೌದಿ ಅರೇಬಿಯಾದಲ್ಲಿ ಸಾಕಷ್ಟು ಜನಪ್ರಿಯಗಳಿಸಿರುವ ಫಾಸ್ಟ್ ಫುಡ್ ಪ್ರೀಯರ ಇಷ್ಟವಾದ ಅಲ್ ಬೈಖ್ ನ ನೂತನ ಶಾಖೆಯು ಇದೀಗ ಯುಎಇ ಯಲ್ಲಿ ತೆರೆಯಲಾಗಿದೆ.
ದುಬೈನ ಜನಪ್ರಿಯ ದುಬೈಮಾಲ್ ನ ಫುಡ್ ಕೋರ್ಟ್ ನಲ್ಲಿ ಅಲ್ ಬೈಖ್ ತೆರೆಯಲಾಗಿದ್ದು ಮೊದಲ ದಿನವೇ ಜನಜಂಗುಳಿಯಿಂದ ತುಂಬಿತ್ತು.

ಅಲ್ ಬೈಖ್ ಸೌಧಿ ಅರೇಬಿಯಾದಲ್ಲಿ ಅದರ ರುಚಿ ಹಾಗೂ ಲಭ್ಯವಿರುವ ವಿವಿದ ಖಾಧ್ಯಗಳಿಂದ ಸಾಕಷ್ಟು ಜನಮನ್ನಣೆಗಳಿಸಿದ್ದು ಇದೀಗ ಯುಎಇ ಗೆ ಅಲ್ ಬೈಖ್ ಲಗ್ಗೆ ಇಟ್ಟಿರುವುದು ಫಾಸ್ಟ್ ಫುಡ್ ಪ್ರೀಯರಿಗೆ ಸಂತಸ ತಂದಿದೆ.
ಉಧ್ಘಾಟನೆಯ ದಿನಾಂಕವನ್ನು ಬಹಿರಂಗವಾಗಿ ಘೋಷಿಸರಿರಲಿಲ್ಲ.
ಹಾಗೆಯೇ ಸಧ್ಯಕ್ಕೆ ಈಗ ಲಭ್ಯವಿರುವುದು ನಗೆಟ್ಸ್ ಹಾಗೂ ಫಿಲ್ಲೆಟ್ಸ್ ಮಾತ್ರವಾಗಿದೆ,
ಅಲ್ ಭೈಖ್ ನಲ್ಲಿ ಸಾಕಷ್ಟು ಹೆಸರುಗಳಿಸಿರುವ ಬ್ರೂಷ್ಟೆಡ್ ಚಿಕನ್ ಇಲ್ಲಿನ ಮೆನುವಿನಲ್ಲಿ ಸಧ್ಯಕ್ಕೆ ಲಭ್ಯವಿಲ್ಲ !