ಮತೀಯ ಸಂಘಟನೆಗಳು ಅದರ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.
ಹಿಜಾಬ್ ಪರಂಪರೆಯಿಂದ ಧರಿಸಿಕೊಂಡು ಬಂದಿದ್ದಾರೆ ಇನ್ನೂ ಮುಂದೆಯೂ ಧರಿಸುತ್ತಾರೆ
ಹಿಜಾಬ್ ವಿವಾದ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸುದ್ದಿಯಾಗುತ್ತಿದೆ ಸರ್ಕಾರ ವಿದ್ಯಾರ್ಥಿನಿಯರನ್ನು ಸರ್ಕಾರ ಬೀದಿಯಲ್ಲಿ ನಿಲ್ಲಿಸಿ ಅವರ ಶಿಕ್ಷಣವನ್ನು ಕಸಿಯತ್ತಿದೆ ಎಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಸಂಯೋಜಕರಾದ ಝೈನ್ ಆತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿದೆ ಎಂದು ಹೇಳಿದರು ಮತೀಯ ಸಂಘಟನೆಗಳು ಇದರ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಅದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಹೇಳಿದರು ಇತ್ತಿಚಿನ ದಿನಗಳಲ್ಲಿ ಹಲವಾರು ಕಡೆಗಳಲ್ಲಿ ಈ ಸಮಸ್ಯೆ ತಲೆ ಎತ್ತಿದೆ ಹಿಜಾಬ್ ಪರಂಪರೆಯಿಂದ ಧರಿಸಿಕೊಂಡು ಬಂದಿದ್ದಾರೆ ಇನ್ನೂ ಮುಂದೆಯೂ ಧರಿಸುತ್ತಾರೆ ಎಂದು ತಿಳಿಸಿದರು