Latest Posts

ಸೌದಿ ಅರೇಬಿಯಾದಲ್ಲಿ ಇಂದು 1,310 ಜನರು ಕೋವಿಡ್ ರೋಗಮುಕ್ತಿ; 30 ಸಾವು ಮತ್ತು 1,019 ಹೊಸ ಪ್ರಕರಣಗಳು ದಾಖಲು

ರಿಯಾದ್: ಸೌದಿ ಅರೇಬಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 1,310 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಸೌದಿ ಆರೋಗ್ಯ ಸಚಿವಾಲಯ ತಿಳಿಸಿದೆ. 30 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದು 1,019 ಹೊಸ ಪ್ರಕರಣಗಳು ದೃಡಪಟ್ಟಿದೆ.

ದೇಶದ ವಿವಿಧ ಆಸ್ಪತ್ರೆಗಳಲ್ಲಿ 21,815 ರೋಗಿಗಳಿದ್ದಾರೆ. ಈ ಪೈಕಿ 1,582 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ.

ಮಕ್ಕಾ 96, ರಿಯಾದ್ 56, ಉನೈಸಾ 52 ಮತ್ತು ಮದೀನಾ 50 ಇಂದು ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕೋವಿಡ್ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 3,785 ಕ್ಕೆ ಮತ್ತು ಒಟ್ಟು ಪ್ರಕರಣಗಳು 311,855 ಕ್ಕೆ ಏರಿದೆ.ಇಂದು 1,310 ರೋಗಿಗಳನ್ನು ಗುಣಪಡಿಸಲಾಗಿದ್ದು, ದೇಶದಲ್ಲಿ ಒಟ್ಟು ಗುಣಪಡಿಸಿದ ಪ್ರಕರಣಗಳ ಸಂಖ್ಯೆ 286,255 ಕ್ಕೆ ತಲುಪಿದೆ.

Share this on:
error: Content is protected !!