Latest Posts

ಸಹಧರ್ಮಿಣಿ(ಹೆಂಡತಿ) ಹೆರಿಗೆ ಕಾಲದಲ್ಲಿ ಪತಿಗೆ ರಜೆ ಘೋಷಿಸಿದ ಮೊದಲ ಅರಬ್ ರಾಷ್ಟ್ರ!!!

ದುಬೈ: ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಪಿತೃತ್ವ ರಜೆ ನೀಡುವ ಫೆಡರಲ್ ಕಾನೂನಿಗೆ ತಿದ್ದುಪಡಿ ತರಲು ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ ಯುಎಇ ಖಾಸಗಿ ವಲಯದ ಪತಿಯರಿಗೆ ಹೆರಿಗೆ ರಜೆ ನೀಡಿದ ಮೊದಲ ಅರಬ್ ರಾಷ್ಟ್ರವಾಯಿತು.

ನವಜಾತ ಶಿಶುವನ್ನು ನೋಡಿಕೊಳ್ಳಲು ತಂದೆಗೆ ಐದು ದಿನಗಳ ವೇತನ ರಜೆ ಇದೆ. ಮಗು ಹುಟ್ಟಿದ ಆರು ತಿಂಗಳ ನಂತರ ಈ ರಜೆ ತೆಗೆದುಕೊಳ್ಳಬಹುದು.

ಕಾನೂನಿನ ಬದಲಾವಣೆಯು ಲಿಂಗ ಸಮಾನತೆ, ಸಮಾನತೆ ಮತ್ತು ಕುಟುಂಬಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

Share this on:
error: Content is protected !!