ದುಬೈ: 55 ವರ್ಷದ ಮೇಲ್ಪಟ್ಟವರಿಗೆ ನಿವೃತ್ತಿ ವೀಸಾ ಯುಎಇ ಸರಕಾರ ಘೋಷಿಸಿದೆ. ವೀಸಾ ಐದು ವರ್ಷಗಳ ಕಾಲ ದುಬೈನಲ್ಲಿ ನಿವೃತ್ತಿಯ ಹೆಸರಿನಲ್ಲಿರುತ್ತದೆ. ಅರ್ಜಿದಾರರು ತಿಂಗಳಿಗೆ 20 ಸಾವಿರ ಡಾಲರ್ ಆದಾಯ ಅಥವಾ 1 ಮಿಲಿಯನ್ ಡಾಲರ್ ಉಳಿತಾಯವನ್ನು ಹೊಂದಿರಬೇಕು.ಇಲ್ಲದಿದ್ದರೆ ಎರಡು ಮಿಲಿಯನ್ ದಿರ್ಹಾಮ್ ಮೌಲ್ಯದ ಭೂಮಿ ಅಥವಾ ಕಟ್ಟಡ ಸ್ವಂತ ಹೆಸರಿನಲ್ಲಿರಬೇಕು.
ಆರೋಗ್ಯ ವಿಮೆ ಕೂಡ ಕಡ್ಡಾಯವಾಗಿದೆ. ಎರಡು ದಶಲಕ್ಷಕ್ಕೂ ಹೆಚ್ಚು ದಿರ್ಹಾಮ್ ಹೊಂದಿರುವವರು ಉಳಿತಾಯ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. www.retireindubai.com ವೆಬ್ಸೈಟ್ ಮೂಲಕ ದೇಶದ ಒಳಗೆ ಮತ್ತು ಹೊರಗೆ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಮೊದಲು ಆರೋಗ್ಯ ವಿಮೆಯನ್ನು ಖಡ್ಡಾಯವಾಗಿ ತೆಗೆದುಕೊಳ್ಳಬೇಕು. ವೀಸಾ ಅರ್ಜಿಯನ್ನು ತಿರಸ್ಕರಿಸಿದರೆ, ಇನ್ಸೂರೆನ್ಸ್ ಮೊತ್ತವನ್ನು 30 ದಿನಗಳಲ್ಲಿ ಮರುಪಾವತಿಸಲಾಗುತ್ತದೆ. ಪ್ರತಿ ಐದು ವರ್ಷಗಳಿಗೊಮ್ಮೆ ಆನ್ಲೈನ್ನಲ್ಲಿ ವಿಸಾ ನವೀಕರಿಸಲಾಗುತ್ತದೆ.