Latest Posts

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟಕ್ಕೆ ದುಬೈನಲ್ಲಿ 15 ದಿನಗಳವರೆಗೆ ನಿಷೇಧ

ದುಬೈ: ದುಬೈಗೆ ಬರುವ ಮತ್ತು ವಂದೇ ಭಾರತ್ ಕಾರ್ಯಾಚರಣೆಯಲ್ಲಿ ಹೊರ ಹೋಗುವ ಎಲ್ಲಾ  ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು 15 ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.  ಇಂದಿನಿಂದ ಅಕ್ಟೋಬರ್ 3 ರವರೆಗೆ 15 ದಿನಗಳ ತಾತ್ಕಾಲಿಕ ನಿಷೇಧವಿರಲಿದೆ.

ಕೋವಿಡ್ ಪಾಸಿಟಿವ್ ರೋಗಿಗಳನ್ನು  ನಿಯಮಗಳನ್ನು ಉಲ್ಲಂಘಿಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂಬ ಕಾರಣಕ್ಕೆ ದುಬೈ ಸಿವಿಲ್ ಏವಿಯೇಷನ್ ​​ಈ ನಿಷೇಧವನ್ನು ವಿಧಿಸಿದೆ.   ನಿಷೇಧದ ನಂತರ ದುಬೈಗೆ ಬಂದಂತಹ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಶಾರ್ಜಾಕ್ಕೆ ರೀ ಶೆಡ್ಯೂಲ್ ಮಾಡಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

Share this on:
error: Content is protected !!