ದುಬೈ: ಕೋವಿಡ್-19 ನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುಎಇ ವಿಧಿಸಿದ್ದ ಪ್ರವಾಸಿಗಳ ವಿಸಿಟ್ ವೀಸಾ ಮೇಲಿನ ನಿರ್ಬಂಧನೆಗಳನ್ನು ತೆಗೆದುಹಾಕಿದೆ.
ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಝನ್ಸಿಫ್ ಭದ್ರತಾ ಮಾನದಂಡಗಳಿಗೆ ಧಕ್ಕೆಯಾಗದಂತೆ, ಕೋವಿಡ್ 19 ನಿಯಂತ್ರಣಾ ಕ್ರಮಗಳಲ್ಲಿ ಕೆಲವು ಬದಲಾವಣೆ ಮಾಡಿದೆ. ಆದರೆ ಉದ್ಯೋಗನಿಮಿತ್ತ ವೀಸಾಗಳಿಗೆ ಇನ್ನೂ ಕಾಯಬೇಕಾಗಿದೆ.
ದೇಶದ ಪ್ರವಾಸೋಧ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸಂದರ್ಶಕರ ವೀಸಾವನ್ನು ಮರು ನೀಡಲಾಗುವುದು,ಆದರೆ ಕೋವಿಡ್ 19 ಸುರಕ್ಷತಾ ಮಾನದಂಡಗಳಲ್ಲಿ ಯಾವುದೇ ರಾಜಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಏತನ್ಮಧ್ಯೆ ಸತತ ಎರಡನೇ ದಿನವು ಕೋವಿಡ್ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು ಇಪ್ಪತ್ತನಾಲ್ಕು ಘಂಟೆಗಳಲ್ಲಿ 1002 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.