ಮಸ್ಕತ್: ಕೋವಿಡ್ ವ್ಯಾಪಕವಾಗಿ ಹರಡಿರುವ ಕಾರಣಕ್ಕೆ ಮುಚ್ಚಲ್ಪಟ್ಟ ಮಸೀದಿಗಳನ್ನು ಮತ್ತೆ ತೆರೆಯುವ ನಿರ್ಧಾರ ಮಾಡಿದೆ. ಸಾರ್ವಜನಿಕರಿಗಾಗಿ ಪ್ರಾರ್ಥನೆ ಮಾಡಲು ನವೆಂಬರ್ 15 ರಂದು ಮಸೀದಿಗಳನ್ನು ತೆರೆಯಲಾಗುವುದು ಎಂದು ಒಮಾನಿನ ಔಖಾಫ್ ಧಾರ್ಮಿಕ ಮಂಡಳಿ ಸಚಿವಾಲಯ ಪ್ರಕಟಿಸಿದೆ.
ಒಮಾನ್ ನಲ್ಲಿ ಇದುವರೆಗೆ ಒಟ್ಟು 98,057 ಜನರಿಗೆ ರೋಗ ಪತ್ತೆಯಾಗಿದ್ದು, ಈ ಪೈಕಿ 88,234 ಜನರು ಕೋವಿಡ್ ಸೋಂಕು ಮುಕ್ತರಾಗಿದ್ದಾರೆ.