Latest Posts

ಯುಎಇ : ಡಿಸೆಂಬರ್ ನಾಲ್ಕರಿಂದ ಜಮ್ಮಾ ನಮಾಝ್ ಗೆ ಅನುಮತಿ

ಡಿ.4 ರಿಂದ‌ ಯುಎಇಯಲ್ಲಿರುವ ಮಸೀದಿಗಳಲ್ಲಿ ಶುಕ್ರವಾರದ ಜುಮ್ಮಾ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗುವುದೆಂದು ಎನ್ ಸಿ ಇ ಎಂ ಎ ಇಂದು ಪ್ರಕಟಿಸಿದೆ.
ಕಳೆದ ಜುಲೈನಲ್ಲಿ ಕಡಿಮೆ ಸಾಮರ್ಥ್ಯದೊಂದಿಗೆ ಎಂದಿನಂತೆ ನಮಾಝ್ ಮಾಡಲು ಅನುಮತಿ ಇದ್ದರೂ ಶುಕ್ರವಾರದ ಜುಮ್ಮಾ ನಮಾಝ್ ಗೆ ಅವಕಾಶವಿರಲಿಲ್ಲ.

ಜುಮ್ಮಾ ನಮಾಝಿಗೆ ಶೇಕಡ ಮೂವತ್ತರಷ್ಟು ಮಂದಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಖುತುಬಾ ಶುರುವಾಗುವ 30 ನಿಮಿಷಗಳ ಮೊದಲು ಮಸೀದಿಗಳು ತೆರೆಯಲಿದ್ದು ನಂತರ ಪ್ರಾರ್ಥನೆಯು ಮುಗಿದ ಮೂವತ್ತು ನಿಮಿಷಗಳ ನಂತರ ಮಸೀದಿಗಳನ್ನು ಬಂದ್ ಮಾಡಲಾಗುವುದು.
ಪ್ರಾರ್ಥನೆಗೆ ಹತ್ತು ನಿಮಿಷಗಳ ಕಾಲವಕಾಶವು ಇದೆ.

ವಿ.ಸೂ‌:- ಮಸೀದಿಗಳ ಶೌಚಾಲಯ ಹಾಗೂ ಜೌಝ್ ಗಳಿಗೆ ಪ್ರವೇಶ‌ ನಿರಾಕರಿಸಲಾಗಿದ್ದು ಪ್ರಾರ್ಥನಾ ವಿಶ್ವಾಸಿಗಳು ತಮ್ಮ ತಮ್ಮ ಮನೆಯಿಂದಲೇ‌‌ ಸಜ್ಜರಾಗಿ ಬರಬೇಕೆಂದು ತಿಳಿಸಿದೆ.

ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಪ್ರಾರ್ಥನಾ ಮ್ಯಾಟ್ ಗಳನ್ನು ತರಬೇಕು ಹಾಗೆಯೇ ವಯಸ್ಸಾದವರು ,ರೋಗ‌ನಿರೋಧಕ ಶಕ್ತಿ ಕಡಿಮೆ ಇರುವವರು ಹೋಗದೇ ಇರುವುದೊಳಿತು.

Share this on:
error: Content is protected !!