Latest Posts

ವೀಸಾ ಅವಧಿ ಮುಗಿದವರಿಗೂ ಅಬುದಾಬಿಯಲ್ಲಿ ಉಚಿತ ಕೋವಿಡ್ ಲಸಿಕೆ

ವಿಸಿಟ್ ವಿಸಾ ದಲ್ಲಿ ಬರುವವರಿಗೆ ಜೂನ್ 15 ರಿಂದ ಗ್ರೀನ್ ಕಾರ್ಡ್ ಪ್ರೊಟೊಕಾಲ್ ಕಡ್ಡಾಯ

ಅಬುದಾಬಿ: ವೀಸಾ ಅವಧಿ ಮುಗಿದವರಿಗೆ ಕೋವಿಡ್ ಲಸಿಕೆ ಅಬುಧಾಬಿಯಲ್ಲಿ ಉಚಿತವಾಗಿ ಲಭ್ಯವಿರುತ್ತದೆ.ಅವಧಿ ಮೀರಿದ ಪ್ರವೇಶ ವೀಸಾ ಹೊಂದಿರುವವರಿಗೆ ಈ ಪ್ರಯೋಜನವು ಲಭ್ಯವಿದೆ. ಅಬುಧಾಬಿಯಲ್ಲಿ 15 ರಿಂದ ಜಾರಿಯಲ್ಲಿರುವ ಗ್ರೀನ್ ಪಾಸ್ ಪ್ರೋಟೋಕಾಲ್ ಪ್ರವಾಸಿಗರಿಗೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬುಧಾಬಿಯಲ್ಲಿ ಗುರುತಿನ ದಾಖಲೆ (Emirates ID) ಅವಧಿ ಮುಗಿದವರಿಗೆ ಉಚಿತ ಕೋವಿಡ್ ಲಸಿಕೆ ನೀಡಲು ಅಬುಧಾಬಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ (ಎನ್‌ಡಿಎಂಸಿ) ನಿರ್ಧರಿಸಿದೆ. ಅವಧಿ ಮೀರಿದ ವಿಸಿಟ್ ವೀಸಾಗಳನ್ನು ಹೊಂದಿರುವವರು ಮತ್ತು ವಿಸಿಟ್ ವೀಸಾ ಕಾಲಾವಧಿಯ ಮುಗಿದ ಯಾವುದೇ ಗುರುತಿನ ದಾಖಲೆಗಳ ಆಧಾರದ ಮೇಲೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ಪಡೆಯಲು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ತುರ್ತು ಸಂದರ್ಭಗಳಲ್ಲಿ ಅಂತಹ ವ್ಯಕ್ತಿಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ.

ಗ್ರೀನ್ ಪಾಸ್ ಪ್ರೋಟೋಕಾಲ್ ಖಡ್ಡಾಯವಾಗಿದ್ದರಿಂದ ಸಂದರ್ಶಕರು ವೀಸಾದ ಯುಐಡಿ ಸಂಖ್ಯೆಯನ್ನು ಬಳಸಿಕೊಂಡು ಅಲ್ ಹುಸ್ನಾ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ತಮ್ಮ ದೇಶದಲ್ಲಿ ವ್ಯಾಕ್ಸಿನೇಷನ್ ಪೂರ್ಣಗೊಳಿಸಿದವರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವಾಕ್ಸಿನ್ ಹಾಕಿದ್ದು ಸಾಬೀತುಪಡಿಸುವ ಎಲೆಕ್ಟ್ರಾನಿಕ್ ಪ್ರಮಾಣಪತ್ರಗಳನ್ನು ಹಾಜರುಪಡಿಸಬೇಕ.ಚೀನಾದಿಂದ ಭೇಟಿ ನೀಡುವ ಸಂದರ್ಶಕರಿಗೆ ಯುಎಇ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುತ್ತದೆ.ಲಸಿಕೆಯು ಪ್ರಸ್ತುತ ಭಾರತ ಸೇರಿದಂತೆ ಇತರ ದೇಶಗಳ ಸಂದರ್ಶಕರ ವೀಸಾಗಳಿಗೆ ಲಭ್ಯವಿರಲಿಲ್ಲ.ಹೀಗಿದ್ದರೂ ಹಿಂದೆ ಯುಎಇಯಲ್ಲಿ ಲಸಿಕೆ ಹಾಕಲು ಅವಕಾಶ ಪಡೆದ ಸಂದರ್ಶಕ ವೀಸಾ ಹೊಂದಿರುವವರು ಯುಐಡಿಯಲ್ಲಿ ನೋಂದಾಯಿಸಿಕೊಂಡರೆ ಅಲ್ ಹುಸ್ನಾ ಅಪ್ಲಿಕೇಶನಲ್ಲಿ ಹಸಿರು ಬಣ್ಣ ಕಾಣುತ್ತದೆ.

Share this on:
error: Content is protected !!