ಜಿದ್ದಾ: ಕೋವಿಡ್ ನಿಯಂತ್ರಣದ ಭಾಗವಾಗಿ ಸೌದಿ ಅರೇಬಿಯಾದಲ್ಲಿ ಬಿಡುಗಡೆಯಾದ ಪೂರ್ಣ ಶ್ರೇಣಿಯ ‘ತವಕ್ಕಲ್ನಾ’ ಮೊಬೈಲ್ ಆ್ಯಪ್ ಈಗ ಭಾರತ ಸೇರಿದಂತೆ 75 ವಿದೇಶಗಳಲ್ಲಿ ಲಭ್ಯವಾಗಲಿದೆ.ಸೌದಿ ಸ್ವದೇಶಿಗರು ಮತ್ತು ವಿದೇಶಿಯರ ಆರೋಗ್ಯ ಸ್ಥಿತಿಯನ್ನು ನವೀಕರಿಸಲು ಆರೋಗ್ಯ ಸಚಿವಾಲಯದ ಅಡಿಯಲ್ಲಿ ಪ್ರಾರಂಭಿಸಲಾದ ತವಕಲ್ನಾ ಆ್ಯಪ್ ಅನ್ನು ಈಗ ದೇಶದ ಹೊರಗಡೆ ಸಹ ಬಳಸಬಹುದು. ತವಕ್ಕಲ್ನಾ ಅಪ್ಲಿಕೇಶನ್ ಈಗ ಹೆಚ್ಚಿನ ಅರಬ್ ದೇಶಗಳಲ್ಲಿ ಮತ್ತು ವಿವಿಧ ಯುರೋಪಿಯನ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಆ್ಯಪ್ ನಿಂದ ವಿವಿಧ ಸೇವೆಗಳನ್ನು ಪಡೆಯಬಹುದು.
ಸೌದಿ ಅರೇಬಿಯಾದಿಂದ ವಿವಿಧ ದೇಶಗಳಿಗೆ ರಜಾದಿನಗಳಿಗೆ ತೆರಳಿದ ವಲಸಿಗರಿಗೆ ಇದು ಉತ್ತಮ ಪರಿಹಾರವಾಗಿದೆ. ಸೌದಿ ಅರೇಬಿಯಾದಿಂದ ಲಸಿಕೆ ಪಡೆದವರ ಮಾಹಿತಿಯನ್ನು ನವೀಕರಿಸುವ ಏಕೈಕ ಅಪ್ಲಿಕೇಶನ್ ಇದು. ಎರಡೂ ಲಸಿಕೆಗಳನ್ನು ಪಡೆದವರ ಆರೋಗ್ಯ ಸ್ಥಿತಿ, ಒಂದು ಲಸಿಕೆ ತೆಗೆದುಕೊಂಡ 14 ದಿನಗಳ ನಂತರ ಅಥವಾ ಈ ಹಿಂದೆ ಕೋವಿಡ್ ಕಾಯಿಲೆಗೆ ತುತ್ತಾದವರ ತವಾಕಲ್ನಾ ಅಪ್ಲಿಕೇಶನ್ನಲ್ಲಿ ಕಡು ಹಸಿರು ಬಣ್ಣದಲ್ಲಿ ದಾಖಲಾಗಿರಬಹುದು.
ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಅಪ್ಲಿಕೇಶನ್ ಸ್ಟಾಟಸ್ ಹಸಿರು ಬಣ್ಣದ್ದಾಗಿದ್ದರೆ ಕಡ್ಡಾಯ ಕ್ವಾರಂಟೈನ್ ಅಗತ್ಯವಿಲ್ಲ. ತವಕ್ಕಲ್ನಾ ಅಪ್ಲಿಕೇಶನ್ ಸೌದಿಯ ಹೊರಗೆ ಕಾರ್ಯನಿರ್ವಹಿಸದ ಕಾರಣ ಅನೇಕ ಜನರು ಸಂಕಷ್ಟಕ್ಕೊಳಗಾಗಿದ್ದರು.ಅಪ್ಲಿಕೇಶನ್ ಇನ್ನು ಮುಂದೆ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಕಾರಣ ಇದೀಗಈ ಸಮಸ್ಯೆಯನ್ನು ಪರಿಹರಿಸಬಹುದು.