ಮನಮಾ: ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯರಿಗೆ ಹೊಸ ಕೆಲಸದ ವೀಸಾ ನೀಡುವುದನ್ನು ಬಹ್ರೇನ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.ಬಹ್ರೇನ್ ದೇಶದ ಹೊರಗಿನ ಜನರಿಗೆ ಮತ್ತು ಕೆಂಪು ಪಟ್ಟಿಯಲ್ಲಿರುವ ಸ್ಥಳಗಳಿಗೆ ಕೆಲಸದ ವೀಸಾ ನೀಡುವುದನ್ನು ನಿಲ್ಲಿಸಿದೆ ಎಂದು ಕಾರ್ಮಿಕ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.

ಭಾರತ ಸೇರಿದಂತೆ ಆರು ದೇಶಗಳು ಕೆಂಪು ಪಟ್ಟಿಯಲ್ಲಿವೆ.ಭಾರತ ಜೊತೆಗೆ, ಬಹ್ರೇನ್ ಪಾಕಿಸ್ತಾನ,ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ವಿಯೆಟ್ನಾಂ ಜನರಿಗೆ ಕೆಲಸದ ವೀಸಾ ನೀಡುವುದನ್ನು ನಿಲ್ಲಿಸಿದೆ.