ಕುವೈತ್:ಭಾರತದಿಂದ ಕುವೈತ್ಗೆ ವಿಮಾನ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ. ಆಗಸ್ಟ್ 1 ರಿಂದ ವಿದೇಶಿಯರ ಪ್ರವೇಶ ನಿಷೇಧವನ್ನು ತೆಗೆದುಹಾಕುವ ಕ್ಯಾಬಿನೆಟ್ ನಿರ್ಧಾರವನ್ನು ಅನುಸರಿಸಿ ವಿಮಾನಯಾನ ಸಂಸ್ಥೆಗಳಾದ ಜಜೀರಾ ಏರ್ವೇಸ್ ಮತ್ತು ಕುವೈತ್ ಏರ್ವೇಸ್ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿವೆ. ಪ್ರಸ್ತುತ, ಜಜೀರಾ ಏರ್ವೇಸ್ ಮತ್ತು ಕುವೈತ್ ಏರ್ವೇಸ್ ಕೊಚ್ಚಿಯಿಂದ ವಿಮಾನಗಳನ್ನು ನಿಗದಿಪಡಿಸಿದೆ. ತಿರುವನಂತಪುರಂನಿಂದ ಕುವೈತ್ ಏರ್ವೇಸ್ ವಿಮಾನವನ್ನು ನಿಗದಿಪಡಿಸಲಾಗಿದೆ ಆದರೆ ಜಜೀರಾ ವಿಮಾನ ಇನ್ನೂ ಪ್ರಾರಂಭವಾಗಿಲ್ಲ.
ಟಿಕೆಟ್ಗಳು ಕೊಚ್ಚಿಯಿಂದ 52,000 ರೂ. ಮತ್ತು ತಿರುವನಂತಪುರಂನಿಂದ 62,000 ರೂ. ನಿಗದಿಪಡಿಸಲಾಗಿದ್ದು ವಿಮಾನ ರದ್ದಾದರೆ, ಟಿಕೆಟ್ನಲ್ಲಿ ಮರುಪಾವತಿ ಮಾಡಲಾಗುವುದಿಲ್ಲ ಎಂದು ತಿಳಿದುಬಂದಿದೆ.ಇಂತಹ ಕಷ್ಟಕರ ಪರಿಸ್ಥಿತಿಗಳಲ್ಲಿ, ವಿಮಾನಯಾನ ಸಂಸ್ಥೆಗಳು, ಲಾಭದ ದುರಾಸೆಯಿಂದ ಪ್ರವಾಸಿ ಪ್ರಯಾಣಿಕರನ್ನು ಶೋಷಿಣೆ ಮಾಡುತ್ತಿದೆ ಮತ್ತು ಟಿಕೆಟ್ ದರವನ್ನು ನಾಲ್ಕರಿಂದ ಐದು ಪಟ್ಟು ಹೆಚ್ಚಿಸುತ್ತಿವೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.