ದುಬೈ: ಯುಎಇಯಲ್ಲಿ ಇಂದು 2,184 ಜನರಿಗೆ ಕೋವಿಡ್ ದೃಢ ಪಡಿಸಿದ್ದಾರೆ. 2,105 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ತಡೆಗಟ್ಟುವಿಕೆ ಸಚಿವಾಲಯ ತಿಳಿಸಿದೆ.
ಇಲ್ಲಿಯವರೆಗೆ, ಯುಎಇಯಲ್ಲಿ ಒಟ್ಟು 6,31,160 ಜನರಿಗೆ ಸೋಂಕು ದೃಢಪಟ್ಟಿದೆ . ಈ ಪೈಕಿ 6,09,711 ಗುಣಮುಖರಾಗಿದ್ದು, 1,807 ಮಂದಿ ಸಾವನ್ನಪ್ಪಿದ್ದಾರೆ. ಯುಎಇ ಯಲ್ಲಿ ಪ್ರಸ್ತುತ 19,642 ಕೋವಿಡ್ ರೋಗಿಗಳಿದ್ದಾರೆ.