Latest Posts

ಶೈಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನ – ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಹಾಗೂ ಅಧೀನ ಸಮಿತಿಗಳಿಂದ ತೀವೃ ಸಂತಾಪ

ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರು, ಅಬುಧಾಬಿ ಎಮಿರೇಟ್ಸ್ ಆಡಳಿತಗಾರ ಶೈಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಮೆ 13 ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಅವರು ದೀರ್ಘ ಕಾಲದ ಆಸೌಖ್ಯದಿಂದ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಸುಮಾರು 73 ವರ್ಷ ವಯಸ್ಸಾಗಿತ್ತು. ಪ್ರಬುದ್ಧ ಆಡಳಿತ ನೀಡಿದ್ದ ಶೈಖ್ ಖಲೀಫ ಅವರು ದೇಶದ ಬಹುತ್ವ, ಸಾಮರಸ್ಯವನ್ನು ಬಹಳ ಗೌರವಿಸಿದ್ದರು. ಯುಎಇ ಮೊದಲ ಅಧ್ಯಕ್ಷರಾಗಿದ್ದ ಶೈಖ್ ಝಾಯೆದ್ ಅವರ ವಿಯೋಗದ ಬಳಿಕ 2004 ನವೆಂಬರ್ ನಲ್ಲಿ ಎರಡನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು , ಶೈಖ್ ಖಲೀಫ ಅವರ ವಿಯೋಗಕ್ಕೆ ಮುಸ್ಲಿಂ ಜಗತ್ತು ಹಾಗೂ ಜಾಗತಿಕ ನಾಯಕರು ಸಂತಾಪ ಸೂಚಿಸಿದ್ದಾರೆ. ಶೈಖ್ ಖಲೀಫ ವಿಯೋಗದ ಪ್ರಯುಕ್ತ ಯುಎಇ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.

ಶೈಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ವಿಯೋಗಕ್ಕೆ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಅಧ್ಯಕ್ಷರಾದ ಸೈಯ್ಯದ್ ಆಸ್ಕರ್ ಅಲಿ ತಂಙಳ್ ಮತ್ತು ಅಧೀನ ಸಮಿತಿಗಳ ಪ್ರಮುಖರು ಅಗಾಧ ದುಃಖವನ್ನು ವ್ಯಕ್ತಪಡಿಸಿ ಸಂತಾಪವನ್ನು ಸೂಚಿಸುವುದರೊಂದಿಗೆ ಮೃತರ ಮೇಲೆ ಎಲ್ಲಾ ದೀನಿ ಸಹೃದಯರು ಮಯ್ಯಿತ್ ನಮಾಝ್ ಮತ್ತು ವಿಶೇಷ ದುಆ ಕಾರ್ಯವನ್ನು ನೆರವೇರಿಸಬೇಕೆಂದು ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Share this on:
error: Content is protected !!