Latest Posts

ಇಂಡಿಯನ್ ಆಯಿಲ್ ಕಾರ್ಪೊರೇಷನ್ನಿನ ತೈಲ ಹಡಗು ಶ್ರೀಲಂಕಾ ತೀರದಲ್ಲಿ ಬೆಂಕಿಗಾಹುತಿ

ಕೊಲಂಬೊ: ಭಾರತೀಯ ತೈಲ ನಿಗಮಕ್ಕೆ ಕಚ್ಚಾ ತೈಲ ಸಾಗಿಸುತ್ತಿದ್ದ ನ್ಯೂಡೈಮoಡ್  ಹಡಗಿಗೆ ಶ್ರೀಲಂಕಾ ತೀರದಲ್ಲಿ ಬೆಂಕಿ ಕಾಣಿಸಿ ಕೊಂಡಿದೆ.   ಶ್ರೀಲಂಕಾ ನೌಕಾಪಡೆಯನ್ನು ಉಲ್ಲೇಖಿಸಿ ರಾಯಿಟರ್ಸ್ ಈ ಸುದ್ದಿ ಬಿಡುಗಡೆ ಮಾಡಿದೆ.
ಕುವೈತ್‌ನಿಂದ ಪಾರದ್ವೀಪಕ್ಕೆ  ಹೋಗುವ ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. 

ಶ್ರೀಲಂಕಾದ ಪೂರ್ವ ಕರಾವಳಿಯಲ್ಲಿ ಸುಮಾರು 20 ನಾಟಿಕಲ್ ಮೈಲಿ ದೂರದಲ್ಲಿ ಈ ಅಪಘಾತ ಸಂಭವಿಸಿದೆ.
ಶ್ರೀಲಂಕಾದ ನೌಕಾಪಡೆಯ ಹೆಲಿಕಾಪ್ಟರ್ ಮತ್ತು ಎರಡು ಹಡಗುಗಳು ರಕ್ಷಣೆಗೆ ಬಂದಿದ್ದು, ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.


ಹಡಗು 270,000 ಟನ್ ಕಚ್ಚಾ ತೈಲವನ್ನು ಸಾಗಿಸುತ್ತಿತ್ತು,   ಹಡಗಿನಿಂದ ಕಚ್ಚಾ ತೈಲ ಸೋರಿಕೆಯಾಗದಂತೆ ತಡೆಯಲು ಕ್ರಮ ಕೈಗೊಳ್ಳುವುದಾಗಿ ಶ್ರೀಲಂಕಾ ಸಾಗರ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.

Share this on:
error: Content is protected !!