Latest Posts

ವಿಶ್ವದಾಧ್ಯಾಂತ ಯುಎನ್ ಸಿಬ್ಬಂಧಿಗಳಿಗೆ ಉಚಿತ ಕೋವಿಡ್ ಲಸಿಕೆ ನೀಡುವುದಾಗಿ ಘೋಷಿಸಿದ ರಷ್ಯಾ

ಮಾಸ್ಕೋ :- ಪ್ರಪಂಚಧಾದ್ಯಂತ ಎಲ್ಲಾ ಯುಎನ್ ಸಿಬ್ಬಂಧಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ರಷ್ಯಾ ಪ್ರಕಟಿಸಿದೆ. ರಷ್ಯಾ ಅಧ್ಯಕ್ಷರಾದ ಪುಟಿನ್ ಅವರು ರಷ್ಯಾ ತಯಾರಿಸಿದ ಕೋವಿಡ್ ಲಸಿಕೆಯಾದ ಸ್ಪುಟಿಕ್ ಫೈವ್ ಅನ್ನು ವಿಶ್ವಸಂಸ್ಥೆ ಮತ್ತು ಅದರ ಕಛೇರಿಗಳ ನೌಕರರಿಗೆ ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದೆ.
ಮಂಗಳವಾರ ನಡೆದ ಯುಎನ್ ಸಾಮಾನ್ಯ ಸಭೆಯ 75 ನೇ ಅಧಿವೇಶನದಲ್ಲಿ ಪುಟಿನ್ ಈ ಹೇಳಿಕೆಯನ್ನು ನೀಡಿದರು.

ಕೊರೋನ ವೈರಸ್ ವಿರುಧ್ಧದ ಲಸಿಕೆ ಅಭಿವೃಧ್ಧಿಪಡಿಸುವ ಕಾರ್ಯದಲ್ಲಿ ಸಹಕರಿಸಲು ಬಯಸುವ ದೇಶಗಳಿಗೆ ಶೀಘ್ರದಲ್ಲೇ ವರ್ಚುವಲ್ ಸಮ್ಮೇಳನವನ್ನು ನಡೆಸಲಿದೆ, ವಿಶ್ವದ ಮೊದಲ ಕೊರೋನ ಲಸಕೆಯಾದ ಸ್ಪುಟ್ನಿಕ್ ಸುರಕ್ಷಿತ ಮತ್ತು ಪರಿಣಾಮಕಾರಿ ವಿಶ್ವಾಸಾರ್ಹ ಎಂದು ಪುಟಿನ್ ಹೇಳಿದರು.

ರಷ್ಯಾ ಈ ಹಿಂದೆ ನೂರು ಮಿಲಿಯನ್ ಡೋಸ್ ಸ್ಪುಟ್ನಿಕ್ ಅನ್ನು ಭಾರತದ ರೆಡ್ಡೀಸ್ ಪ್ರಯೋಗಾಲಯಗಳಿಗೆ ನೀಡಲು ನಿರ್ಧರಿಸಿದ್ದು,ಭಾರತೀಯ ನಿಯಂತ್ರಕರಿಂದ ಅಗತ್ಯವಾದ ಅನುಮೋಧನೆ ಲಭಿಸಿದ ನಂತರ ಪ್ರಯೋಗದ ಮೊದಲ ಹಂತವು ಕೆಲವೇ ವಾರಗಳಲ್ಲಿ ಪ್ರಾರಂಭವಾಗಲಿದೆ.
ರಷ್ಯಾದ ನೇರಹೂಡಿಕೆ ನಿಧಿ ಆರ್ ಡಿಐಎಫ್ ಹಾಗೂ ರೆಡ್ಡೀಸ್ ಪ್ರಯೋಗಾಲಯದ ನಡುವಿನ ಒಪ್ಪಂಧದಲ್ಲಿ ನಿರ್ಧಾರವಾಗಲಿದೆ.

Share this on:
error: Content is protected !!