Latest Posts

ಐ.ಎಸ್.ಎಫ್ ಕುವೈಟ್ ಎರಡನೇ ಹಂತದ ರಕ್ತದಾನ ಶಿಬಿರ: ಅನಿವಾಸಿಗಳ ಕೊಡುಗೆ ಶ್ಲಾಘನೀಯ

ಇಂಡಿಯನ್ ಸೋಶಿಯಲ್ ಪೋರಮ್ ಕುವೈಟ್ (ಐಎಸ್‌ಎಫ್) ಮತ್ತು ಕುವೈಟ್‌ ಸೆಂಟ್ರಲ್ ಬ್ಲಡ್ ಬ್ಯಾಂಕ್‌ ಜಾಬ್ರಿಯಾ ಇದರ ಜಂಟಿ ಸಹಭಾಗಿತ್ವದಲ್ಲಿ ಎರಡನೇ ಹಂತದ ರಕ್ತದಾನ ಶಿಬಿರವು ಯಶಸ್ವಿಯಾಗಿ ಸೆಪ್ಟೆಂಬರ್ 25, 2020ರ ಶುಕ್ರವಾರ ಅಪರಾಹ್ನ 1 ಗಂಟೆಯಿಂದ ಸಂಜೆ 7 ರವರೆಗೆ ಇಲ್ಲಿನ ಜಾಬ್ರಿಯಾದಲ್ಲಿರುವ ಕುವೈಟ್‌ ಸೆಂಟ್ರಲ್ ಬ್ಲಡ್ ಬ್ಯಾಂಕ್‌ನಲ್ಲಿ ಜರುಗಿತು. ಮೊದಲ ಸಾಮೂಹಿಕ ರಕ್ತದಾನ ಶಿಬಿರವನ್ನು ಸೆಪ್ಟೆಂಬರ್ 11 ರಂದು ಕುವೈಟ್‌ನ ಅಲ್ ಅದಾನ್ ಬ್ಲಡ್ ಬ್ಯಾಂಕ್‌ನಲ್ಲಿ ನಡೆಸಲಾಗಿತ್ತು.

ರಕ್ತದಾನ ಶಿಬಿರವನ್ನು ಐಎಸ್ಎಫ್ ಕರ್ನಾಟಕ ಅಧ್ಯಕ್ಷ ಮುಸ್ತಕೀಮ್ ಶಿರೂರ್ ಮತ್ತು ಕಾರ್ಯದರ್ಶಿ ಅಶ್ಫಾಕ್ ಹುಸೇನ್ ಅವರ ಸಮ್ಮುಖದಲ್ಲಿ ಅಲ್ ದಫೇರಿ ರಿಯಲ್ ಎಸ್ಟೇಟ್ ಕಂಪನಿಯ ಎಮ್ ಡಿ ಮತ್ತು ಮೆಟ್ರೋ ಸೂಪರ್ ಮಾರ್ಕೆಟ್ಸ್ ಕುವೈಟ್‌’ನ ಮಾಲೀಕರಾದ ಜರ್ರಾಹ್ ಹಮೂದ್ ಅಲ್ ದಫೇರಿಯವರು ಉದ್ಘಾಟಿಸಿದರು. ಹಾಗೂ ಅವರು ರಕ್ತದಾನದ ಮಹತ್ವವನ್ನು ವಿವರಿಸುತ್ತಾ, ದಾನಿಗಳು ತಮ್ಮ ರಕ್ತವನ್ನು ದಾನ ಮಾಡುವ ಮೂಲಕ ಅದೆಷ್ಟೋ ಮನುಷ್ಯ ಜೀವಗಳನ್ನು ಉಳಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಐಎಸ್ಎಫ್’ನ ಸದಸ್ಯರು ಮಿನಿಸ್ಟ್ರಿ ಆಫ್ ಹೆಲ್ತ್ ಕುವೈಟ್‌’ನ ಕೋವಿಡ್ ಮಾರ್ಗಸೂಚಿಗಳನ್ನು ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ರಕ್ತದಾನ ಶಿಬಿರದ ಚಟುವಟಿಕೆಗಳುv1 ಯಶಸ್ವಿಯಾಗುವಲ್ಲಿ ಮಹತ್ತರ ಪಾತ್ರ ವಹಿಸಿದರು. ಎರಡು ಶಿಬಿರಗಳಿಂದ ಸುಮಾರು 250 ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದು ಇದು ಕುವೈಟ್‌ ಸೆಂಟ್ರಲ್ ಬ್ಲಡ್ ಬ್ಯಾಂಕ್ ಅಧಿಕಾರಿಗಳಿಂದ ಪ್ರಶಂಸಿಸಲ್ಪಟ್ಟಿತು.

ಸಮಾರೋಪದಲ್ಲಿ ಮಾತನಾಡಿದ ಸೆಂಟ್ರಲ್ ಬ್ಲಡ್ ಬ್ಯಾಂಕಿನ ವೈಧ್ಯೆ ಡಾl ಅಸ್ಮಾ ರಫಾತ್ ಮುಹಮ್ಮದ್’ರವರು ಐಎಸ್‌ಎಫ್’ನ ಈ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿದರು. ಐಎಸ್‌ಎಫ್ ಕುವೈಟ್‌ನ ಉಪಾಧ್ಯಕ್ಷರಾದ ತಮೀಮ್ ಮೂಸಾ ಉಳ್ಳಾಲ್’ರವರು ನೆರೆದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ (ಐಎಸ್‌ಎಫ್), ಇಂತಹ ರಕ್ತದಾನ ಶಿಬಿರಗಳು ಮತ್ತು ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸುತ್ತಲೇ ಬರುತ್ತಿವೆ ಮತ್ತು ಹಲವು ಸಂಕಷ್ಟದಲ್ಲಿ ಸಿಲುಕಿರುವ ಅನಿವಾಸಿಗಳನ್ನು ಉದಾತ್ತವಾಗಿ ಸಹಾಯಿಸುತ್ತಲೇ ಬರುತ್ತಿವೆ.

Share this on:
error: Content is protected !!