Latest Posts

ವಿಜಯ್ ಮಲ್ಯರನ್ನು ಭಾರತಕ್ಕೆ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದ ಬ್ರಿಟನ್

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಕೋಟ್ಯಂತರ ಸಾಲ ಪಡೆದ ಮದ್ಯಪಾನ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕಳುಹಿಸಲ್ಲ ಎಂದು ಬ್ರಿಟನ್ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದ “ರಹಸ್ಯ ಕಾನೂನು ಸಮಸ್ಯೆ” ಬಗೆಹರಿಯುವವರೆಗೂ ಮಲ್ಯರನ್ನು ಮರಳಿಸಲು ಸಾಧ್ಯವಿಲ್ಲ ಎಂದು ಬ್ರಿಟಿಷ್ ವಿದೇಶಾಂಗ ಕಚೇರಿ ತಿಳಿಸಿದೆ.

ತನ್ನನ್ನು ಮರಳಿ ಕಳುಹಿಸುತ್ತೇವೆ ಎನ್ನುವ ನ್ಯಾಯಾಲಯದ ಆದೇಶವನ್ನು ವಿರುದ್ಧ ಮುಂಚಿತವಾಗಿ ಬ್ರಿಟಿಷ್ ಸುಪ್ರೀಂ ನ್ಯಾಯಾಲಯಕ್ಕೆ ಭೇಟಿ ನೀಡಿದ್ದರು, ಆದರೆ ನ್ಯಾಯಾಲಯ ಅದನ್ನು ಪರಿಗಣಿಸಲಿಲ್ಲ. ಇದರ ನಂತರ ಭಾರತವು ಮದ್ಯಪಾನ ಉದ್ಯಮಿವನ್ನು ಮರಳಿ ಭಾರತಕ್ಕೆ ತರಲು ಪ್ರಯತ್ನಿಸುತ್ತಿತ್ತು. ಬ್ರಿಟಿಷ್ ಅಧಿಕಾರಿಗಳೊಂದಿಗೆ ಭಾರತ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. ಈ ಪ್ರಕರಣದಲ್ಲಿ ಭಾರತ ಸಾಕ್ಷಿದಾರ ಅಲ್ಲ ಎಂದು ಸಚಿವರು ತಿಳಿಸಿದರು.

ಮನವಿಯನ್ನು ತಿರಸ್ಕರಿಸಿದ ನಂತರ, ಯುರೋಪಿಯನ್ ಮಾನವ ಹಕ್ಕುಗಳ ಒಡಂಬಡಿಕೆಯ 3 ನೇ ಪದ್ದತಿ ಪ್ರಕಾರದ ಅಡಿಯಲ್ಲಿ ಮಲ್ಯ ಯು.ಕೆ ಯಲ್ಲಿ ಆಶ್ರಯಕ್ಕಾಗಿ ಕೋರಿದರು. 2018 ರಲ್ಲಿ ಬ್ರಿಟಿಷ್ ಹೈಕೋರ್ಟ್ ಮಲ್ಯರನ್ನು ಹಸ್ತಾಂತರಿಸುವಂತೆ ಆದೇಶಿಸಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಇದರ ವಿರುದ್ದವಿರುವ ಮೇಲ್ಮನವಿಯನ್ನು ಲಂಡನ್ ಹೈಕೋರ್ಟ್ ವಜಾಗೊಳಿಸಿತ್ತು.

ವಿವಿಧ ಬ್ಯಾಂಕುಗಳಿಂದ 9,000 ಕೋಟಿ ರೂ.ಗಳನ್ನು ಎರವಲು ಪಡೆದ ನಂತರ ಮಲ್ಯ ಅದನ್ನು ಮರುಪಾವತಿಸದೆ ದೇಶವನ್ನು ಬಿಟ್ಟು ಪರಾರಿಯಾದರು. ಮಲ್ಯ 2016 ರ ಮಾರ್ಚ್‌ನಲ್ಲಿ ಆಗಿತ್ತು ಭಾರತ ತೊರೆದದ್ದು.

Share this on:
error: Content is protected !!