ದುಬೈ: ಅಫ್ಘಾನಿಸ್ತಾನದ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ರಶೀದ್ ಖಾನ್ ರವರ ಪತ್ನಿ ಹೆಸರನ್ನು ಗೂಗಲ್ನಲ್ಲಿ ಶೋಧಿಸಿದ ಶೋಧಕರಿಗೆ ಆಘಾತವನ್ನುಂಟು ಮಾಡಿದೆ. ಹುಡುಕಾಟ ಫಲಿತಾಂಶಗಳಲ್ಲಿ ಬಾಲಿವುಡ್ ನಟಿ, ಭಾರತೀಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿಯವರ ಪತ್ನಿ ಅನುಷ್ಕಾ ಶರ್ಮಾರ ಹೆಸರು ತೋರಿಸಿದೆ ಮಾತ್ರವಲ್ಲದೆ ಚಿತ್ರವೂ ಸಹ ತೋರಿಸಿದೆ.
ಕೇವಲ 22 ವರ್ಷ ವಯಸ್ಸಿನ ರಶೀದ್ ಖಾನ್ ರವರು ಇನ್ನೂ ಮದುವೆನೇ ಆಗಿಲ್ಲ. ಆದರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಅವರು ಡಿಸೆಂಬರ್ 11, 2017 ರಂದು ವಿವಾಹವಾಗಿದ್ದರು. ಗೂಗಲ್ ಪ್ರಕಾರ, ರಶೀದ್ ಮತ್ತು ಅನುಷ್ಕಾ ಒಂದೇ ದಿನ ವಿವಾಹವಾದರು. ಗೂಗಲ್ನ ಅಲ್ಗಾರಿತಂ(algorithm) ಸಂಭವಿಸಿದ ದೋಷವು ಅಂತಹ ಹುಡುಕಾಟದ ಫಲಿತಾಂಶಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
2018 ರಲ್ಲಿ ಗೂಗಲ್ನ ಅಲ್ಗಾರಿತಂ(algorithm) ಸಂಭವಿಸಿದ ಘಟನೆ. ಅದೇ ವರ್ಷದಲ್ಲಿ ನಡೆದ ಸಂದರ್ಶನವೊಂದರಲ್ಲಿ ರಶೀದ್ ಖಾನ್ ರವರು ಅನುಷ್ಕಾ ಶರ್ಮಾ ಮತ್ತು ಪ್ರೀತಿಝಾಂಟಾ ನನ್ನ ನೆಚ್ಚಿನ ಬಾಲಿವುಡ್ ನಟಿಯರು ಎಂದು ಹೇಳಿದ್ದರು. ಇದನ್ನು ಅನುಸರಿಸಿ, ರಶೀದ್ ಅವರ ಹೆಸರು ಗೂಗಲ್ನಲ್ಲಿ ಟ್ರೆಂಡಿಂಗ್ ಆಯಿತು.ಇದರೊಂದಿಗೆ ಗೂಗಲ್ ರಶೀದ್ ಮತ್ತು ಅನುಷ್ಕಾ ಅವರನ್ನು ಪರಸ್ಪರ ಗಂಡ ಹೆಂಡತಿ ಎಂದು ಸಂಬಂಧ ಕಲ್ಪಿಸಿದೆ