Latest Posts

ಜನಾಂಗೀಯ ಹಿಂಸಾಚಾರದ ವಿರುದ್ಧ ಅದ್ಭುತ ಜಯ; ಪರ್ದಾ ಧರಿಸಿ ಇಲ್ಹಾನ್ ಒಮರ್ ಯುಎಸ್ ಪ್ರತಿನಿಧಿ ಸಭೆಗೆ ಎಂಟ್ರಿ

ಟ್ರಂಪ್ ರಿಂದ ತೀವ್ರ ಟೀಕಾಕಾರ ಮತ್ತು ಜನಾಂಗೀಯ ದಾಳಿಗೆ ಬಲಿಯಾದ ಇಲ್ಹಾನ್ ಒಮರ್ ಅಮೆರಿಕ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ. ಇಲ್ಹಾನ್ ಮಿನ್ನೇಸೋಟದಿಂದ ಡೆಮೋಕ್ರಾಟ್ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಜಯಶಾಲಿಯಾಗಿದ್ದಾರೆ. ಇಲ್ಹಾನ್ ರಿಪಬ್ಲಿಕನ್ ಅಭ್ಯರ್ಥಿ ಲ್ಯಾಸಿ ಜಾನ್ಸನ್ ಅವರನ್ನು ಸೋಲಿಸಿದರು. “ಇದು ಕೇವಲ ಪ್ರಾರಂಭ” ಎಂದು ಇಲ್ಹಾನ್ ವಿಜಯದ ನಂತರ ಟ್ವೀಟ್ ಮಾಡಿದ್ದಾರೆ.

ಸೊಮಾಲಿ ಅಂತರ್ಯುದ್ಧದ ನಂತರ ಇಲ್ಹಾನ್ 1995 ರಲ್ಲಿ ತನ್ನ 12 ನೇ ವಯಸ್ಸಿನಲ್ಲಿ ನಿರಾಶ್ರಿತರಾಗಿ ಅಮೆರಿಕಕ್ಕೆ ವಲಸೆ ಬಂದರು. ಐದು ವರ್ಷಗಳ ನಂತರ, 17 ನೇ ವಯಸ್ಸಿನಲ್ಲಿ, ಅವರು ಯು.ಎಸ್. ಪ್ರಜೆಯಾದರು. ಇಲ್ಹಾನ್ ಮಿನ್ನೇಸೋಟದ ಐದನೇ ಜಿಲ್ಲೆಯಿಂದ 2018 ರ ನಂತರ ಮೊದಲ ಬಾರಿಗೆ ಪ್ರತಿನಿಧಿ ಸಭೆಯಲ್ಲಿ ಇರಲಿದ್ದಾರೆ. ಕುರಾನ್‌ ಹಿಡಿದುಕೊಂಡು ಪ್ರಮಾಣವಚನ ಸ್ವೀಕರಿಸಿದ ಇಲ್ಹಾನ್, ಸದನದ ಸದಸ್ಯರಲ್ಲಿ ಸತ್ಯಪ್ರತಿಜ್ಞೆ ನಡೆಸಿ, ಪರ್ದಾ ಧರಿಸುವ ಮೂಲಕ 181 ವರ್ಷಗಳ ನಿಷೇಧವನ್ನು ಮೀರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ

Share this on:
error: Content is protected !!