Latest Posts

ಟ್ರಂಪ್ ಹಾಗೂ ಬಿಡೆನ್ ಬೆಂಬಲಿಗರ ನಡುವೆ ಹಿಂಸಾಚಾರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ನಂತರ  ಹಿಂಸಾಚಾರ ಭುಗಿಲೆದ್ದಿದೆ.
ವಾಷಿಂಗ್ಟನ್‍ ನಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಮತ್ತು ಅಧ್ಯಕ್ಷೀಯ ಚುನಾಯಿತ ಜೋ ಬಿಡೆನ್ ಬೆಂಬಲಿಗರ ನಡುವೆ ಭಾರೀ ಮಾರಾಮಾರಿ ನಡೆದಿದೆ. ಘರ್ಷಣೆಯಲ್ಲಿ ಪೊಲೀಸರು ಸೇರಿದಂತೆ ಅನೇಕರು ತೀವ್ರ ಗಾಯಗೊಂಡಿದ್ದಾರೆ.
ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ಟ್ರಂಪ್ ರನ್ನೇ ಇನ್ನೂ ನಾಲ್ಕು ವರ್ಷ ಕಾಲ ಅಧ್ಯಕ್ಷರಾಗಿ ಮುಂದುವರಿಸು ವಂತೆ ಆಗ್ರಹಿಸಿ ಸಹಸ್ರಾರು ಬೆಂಬಲಿಗರು ವಾಷಿಂಗ್ಟನ್ ಬೀದಿಗಳಿಗಿಳಿದು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯನ್ನು ಜೋ ಬಿಡೆನ್ ಬೆಂಬಲಿಗರು ವಿರೋಧಿಸಿದಾಗ ಭಾರೀ ಘರ್ಷಣೆ ಮತ್ತು ಮಾರಾಮಾರಿ ನಡೆಯಿತು. ಉದ್ರಿಕ್ತ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರಿಗೂ ಗಾಯಗಳಾಗಿವೆ. ವಾಷಿಂಗ್ಟನ್‍ನಲ್ಲಿ ಹಿಂಸಾಚಾರ ಭುಗಿಲೆದ್ದಿರುವುದರಿಂದ ಉಳಿದ ರಾಜ್ಯಗಳಲ್ಲೂ ವಿಸ್ತರಿಸಾದಗೆ  ತಡೆಯಲು ಬಾರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Share this on:
error: Content is protected !!