ಟೆಲ್ ಅವೀವ್: ಅಬುಧಾಬಿಯ ರಾಜಕುಮಾರ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಇಸ್ರೇಲ್ ಭೇಟಿ ಮಾಡಲು ಆಹ್ವಾನಿಸಲಾಗಿದೆ. ಆಹ್ವಾನವನ್ನು ಇಸ್ರೇಲಿ ಅಧ್ಯಕ್ಷ ರ್ಯುವೆನ್ ರಿವ್ಲಿನ್ ಕಳುಹಿಸಿದ್ದಾರೆ. ಅಲ್ಲದೇ ಮೊಹಮ್ಮದ್ ಬಿನ್ ಜಾಯೆದ್ ಯುಎಇಗೆ ಭೇಟಿ ನೀಡಲು ರಿವೊಲ್ ಅವರನ್ನೂ ಆಹ್ವಾನಿಸಿದ್ದಾರೆ.
ಇಸ್ರೇಲ್ ಅಧ್ಯಕ್ಷರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯಕ್ಕೆ ಕರೆ ನೀಡಿದ್ದಾರೆ. ಅಬ್ರಹಾಂ ಒಪ್ಪಂದವನ್ನು ನನಸಾಗಿಸಲು ಅಬುಧಾಬಿ ರಾಜಕುಮಾರರ ಪ್ರಯತ್ನವನ್ನು ಅಧ್ಯಕ್ಷರು ಶ್ಲಾಘಿಸಿದ್ದಾರೆ ಎಂದು ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಅಧ್ಯಕ್ಷರ ಕ್ರಿಯಾತ್ಮಕ ಮತ್ತು ರಚನಾತ್ಮಕ ನಿಲುವಿಗೆ ಶೇಖ್ ಮೊಹಮ್ಮದ್ ಧನ್ಯವಾದ ಅರ್ಪಿಸಿದರು.
ಕಳೆದ ಆಗಸ್ಟ್ 13 ರಿಂದ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಪ್ರಾರಂಭವಾಗಿದ್ದವು. ಈ ಒಂದು ಐತಿಹಾಸಿಕ ಒಪ್ಪಂದಕ್ಕೆ ಸೆಪ್ಟೆಂಬರ್ 15 ರಂದು ಶ್ವೇತಭವನದಲ್ಲಿ ಸಹಿ ಹಾಕಲಾಯಿತು.
ಶೀಘ್ರದಲ್ಲಿ ಅಬುಧಾಬಿ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಇಸ್ರೇಲ್ ಭೇಟಿ
