ವಾಷಿಂಗ್ಟನ್ : ಕೊರೊನಾ ವೈರಸ್ ಪ್ರಸರಣವನ್ನು ತಡೆಯಲು ಅಮೆರಿಕದಲ್ಲಿ ಲಾಕ್ಡೌನ್ ಹೇರುವುದಿಲ್ಲ . ಬದಲಿಗೆ ದೇಶದಾದ್ಯಂತ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ತಿಳಿಸಿದರು.
ದೇಶದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡುವ ಅಗತ್ಯವಿಲ್ಲ.ಆದರೆ, ಕೆಲ ವ್ಯಾಪಾರ ವಹಿವಾಟಿಗೆ ನಿರ್ಬಂಧ ವಿಧಿಸಲಾಗುವುದು ‘ ಎಂದರು.ಕೊರೊನಾ ಹರಡುವುದನ್ನು ತಡೆಯಲು ವೈಜ್ಞಾನಿಕ ಮಾರ್ಗ ಅನುಸರಿಸಲಿದ್ದೇವೆ.ದೇಶದ ಆರ್ಥಿಕತೆಯನ್ನು ಸ್ಥಗಿತಗೊಳಿಸುವುದಿಲ್ಲ . ಬದಲಿಗೆ ಕೊರೊನಾ ವೈರಸ್ ಅನ್ನು ಲಾಕ್ಡೌನ್ ಮಾಡುತ್ತೇವೆ ‘ ಎಂದು ಮಾಹಿತಿ ನೀಡಿದರು.
ಉದಾಹರಣೆಗೆ ಪ್ರಕರಣಗಳು ಕಡಿಮೆಯಿರುವ ರಾಜ್ಯಗಳಲ್ಲಿ ಜಿಮ್ಗಳನ್ನು ತೆರೆಯಲು ಅನುಮತಿ ನೀಡಲಾಗುವುದು . ಅದರಲ್ಲೂ ಸಮಯ ಮತ್ತು ಜನರ ಸಾಮರ್ಥ್ಯದಲ್ಲಿ ನಿರ್ಬಂಧವನ್ನು ಹೇರಲಾಗುವುದು ‘ ಎಂದು ವಿವರಿಸಿದರು.
ಗವರ್ನ್ರಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ . ದೇಶದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ನಿರ್ಧಾರಕ್ಕೆಗೊಳ್ಳಲಾಗಿದೆ 33 ಕೋಟಿ ಅಮೆರಿಕನ್ನರಿಗೆ ಲಸಿಕೆಯನ್ನು ತಲುಪಿಸಬೇಕಾಗಿದೆ.ಇದಕ್ಕಾಗಿ ಆಗಾಧ ಸಂಪನ್ಮೂಲ, ಜನರು ಮತ್ತು ಉತ್ಪನಗಳ ಅವಶ್ಯಕತೆ ಇದೆ. ಇದು ಕಷ್ಟಕರ ಕೆಲಸವಾಗಿದೆ.ಬಹಳ ಸಮಯ ತೆಗೆದುಕೊಳ್ಳಲಿದೆ. ಇದಕ್ಕಾಗಿ ಎಲ್ಲರೂ ಜೊತೆಗೂಡಿ ಶ್ರಮಿಸಬೇಕು ಎಂದು ಬೈಡನ್ ತಿಳಿಸಿದ್ದಾರೆ.