Latest Posts

‘ಕಂಗನಾಗೆ ಲೈಂಗಿಕಾಸಕ್ತಿ ಹೆಚ್ಚು’; ಅರ್ನಾಬ್ ಅವರ ಚಾಟ್‌ನಲ್ಲಿ ಕಂಗನಾ ವಿರುದ್ಧವೂ ಉಲ್ಲೇಖನೆ

ಮುಂಬೈ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ವಾಟ್ಸಾಪ್ ಚಾಟ್ ದಾಖಲೆಗಳಲ್ಲಿ ನಟಿ ಕಂಗನಾ ರನೌತ್ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ವರದಿಯಾಗಿದೆ. ವಾಟ್ಸಾಪ್ನಲ್ಲಿ ಅರ್ನಾಬ್ ಪ್ರಕಾರ, ಕಂಗನಾ ರನೌತ್ ಲೈಂಗಿಕವಾಗಿ ಹೆಚ್ಚು ಆಸಕ್ತಿ ಹೊಂದಿರುವ ಹೆಣ್ಣು ಎಂದು ಉಲ್ಲೇಖಿಸಲಾಗಿತ್ತು.

ಅರ್ನಾಬ್, ನಟ ಹೃತಿಕ್ ರೋಷನ್ ಅವರೊಂದಿಗಿನ ಸಂದರ್ಶನದ ನಂತರವಾಗಿತ್ತು ಕಂಗನಾ ರನೌತ್ ಬಗೆಗಿನ ವಿಮರ್ಶನೆ. ಸಂಧರ್ಶನದಲ್ಲಿ ರೋಷನ್ ಕಂಗನಾ ವಿರುದ್ದ ಗಂಭೀರ ಆರೋಪ ನಡೆಸಿದ್ದರು, ಆದರೆ ಕ್ಯಾಮೆರಾದ ಹೊರಗೆ ಕಂಗನಾ ರನೌತ್ ಮತ್ತು ಹೃತಿಕ್ ವರ್ತನೆಯ ಬಗ್ಗೆ ಅರ್ನಾಬ್ ಅವರು ವಾಟ್ಸಾಪ್ ಸಂದೇಶಗಳಲ್ಲಿ  ಪ್ರತಿಕ್ರಿಯಿಸಿದ್ದಾರೆ.

ಅರ್ನಾಬ್ ಅವರೊಂದಿಗೆ ಚಾಟ್ ಮಾಡಿದ ವ್ಯಕ್ತಿ ಕಂಗನಾ ಮಾನಸಿಕ ಅಸ್ವಸ್ಥೆ  ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅರ್ನಾಬ್, ಕಂಗನಾ ಲೈಂಗಿಕತೆಗೆ ವ್ಯಸನಿಯಾಗಿದ್ದು, ಒಂದು ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದಾಳೆ  ಎಂದು ಚಾಟ್ ಮಾಡಿದ ವ್ಯಕ್ತಿಯೊಂದಿಗೆ ತಿಳಿಸಿದ್ದಾರೆ. ಈ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ  ಈಗ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಆದರೆ, ಅರ್ನಾಬ್ ಈ ಆರೋಪದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಮೊದಲು ಅರ್ನಾಬ್ ಗೋಸ್ವಾಮಿ ಮತ್ತು ಬಾರ್ಕ್ ಸಿಇಒ ಪಾರ್ಥೋಡಾಸ್ ಗುಪ್ತಾ ನಡುವಿನ ವಾಟ್ಸಾಪ್ ಚಾಟ್‌ಗಳು ಹೆಚ್ಚು ವಿವಾದಾಸ್ಪದವಾಗಿದ್ದವು. ಪುಲ್ವಾಮಾ ದಾಳಿಯನ್ನು ಸಂಭ್ರಮಿಸುತ್ತಿದ್ದ ಅರ್ನಾಬ್ ಗೋಸ್ವಾಮಿ ಅವರ ವಾಟ್ಸಾಪ್ ಚಾಟ್ ಮಾಹಿತಿ ಈ ಮುಂದೆ  ಹೊರಬಿದ್ದಿದೆ.

ಪುಲ್ವಾಮಾ ದಾಳಿಯನ್ನು ಇತರ ಮಾಧ್ಯಮಗಳಿಗಿಂತ ಮೊದಲೇ ವರದಿ ಮಾಡುವ ಮೂಲಕ ಅವರು ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಅರ್ನಾಬ್ ಚಾಟ್‌ನಲ್ಲಿ ಹೇಳಿದ್ದಾರೆ.

ಫೆಬ್ರವರಿ 14, 2019 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು.

Share this on:
error: Content is protected !!