Latest Posts

ಪ್ಯಾಲೆಸ್ಟೀನಿಯರನ್ನು ಹೊರಹಾಕಿ ಯಹೂದಿ ಉದ್ಯಾನವನವನ್ನು ನಿರ್ಮಿಸುವ ಯೋಜನೆ ಕೈಗೊಂಡ ಇಸ್ರೇಲ್!!!

ಸಿಲ್ವಾನ್: ಇಸ್ರೇಲ್ ನಲ್ಲಿರುವ ಪ್ಯಾಲೇಸ್ಟಿನಿಯನ್ ಮನೆಗಳನ್ನು ಕೆಡವಲು ಮತ್ತು ಆಕ್ರಮಿತ ಪೂರ್ವ ಜೆರುಸಲೆಮ್ನಲ್ಲಿ ಯಹೂದಿ ಥೀಮ್ ಪಾರ್ಕ್ ನಿರ್ಮಿಸಲು ಅಥಾರಿಟಿ ಮುಂದಾಗಿದೆ. ಸಿಲ್ವಾನ್‌ನ ಅಲ್ ಬುಸ್ತಾನ್‌ನಲ್ಲಿ 100 ಕ್ಕೂ ಹೆಚ್ಚು ಕಟ್ಟಡಗಳಲ್ಲಿ ವಾಸಿಸುತ್ತಿರುವ 1,500 ಪ್ಯಾಲೆಸ್ಟೀನಿಯಾದವರನ್ನು ಹೊರಹಾಕಲು ಮತ್ತು ಉದ್ಯಾನವನದ ನಿರ್ಮಾಣದೊಂದಿಗೆ ಮುಂದುವರಿಯಲು ಇಸ್ರೇಲ್ ಯೋಜಿಸಿದೆ. ಇಸ್ರೇಲ್ ಸೇನೆಯು 13 ಕುಟುಂಬಗಳಿಗೆ 21 ದಿನಗಳಲ್ಲಿ ಸ್ಥಳಾಂತರಿಸುವಂತೆ ನೋಟಿಸ್ ನೀಡಿದೆ.

ಸೋಮವಾರ, ಸೈನಿಕರು ಜೆರುಸಲೆಮ್ ಮುನ್ಸಿಪಾಲಿಟಿ ಇನ್ಸ್‌ಪೆಕ್ಟರ್‌ಗಳೊಂದಿಗೆ ಆಗಮಿಸಿ ನೋಟಿಸ್ ನೀಡಿದ್ದಾರೆ. ಆದರೆ ಯಾವುದೇ ಪ್ಯಾಲೆಸ್ಟೀನಿಯಾದವರು ನೇರವಾಗಿ ನೋಟಿಸ್ ಸ್ವೀಕರಿಸಲಿಲ್ಲ. ಇಸ್ರೇಲ್ ಸರ್ಕಾರ ಕಟ್ಟಡ ಪರವಾನಗಿ ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ಪ್ಯಾಲೇಸ್ಟಿನಿಯನ್ ಮನೆಗಳನ್ನು ನೆಲಸಮ ಮಾಡುತ್ತಿದೆ. ಇಸ್ರೇಲಿ ಪಡೆಗಳು ತಮ್ಮ ಮನೆಗಳನ್ನು ಕೆಡವಲು ಯಾವುದೇ ಕ್ಷಣದಲ್ಲಿ ಬರಬಹುದೆಂಬ ಭಯದಿಂದ ಪ್ಯಾಲೇಸ್ಟಿನಿಯನ್ ಕುಟುಂಬಗಳು ವಾಸಿಸುತ್ತಿವೆ ಎಂದು ಜಹಾಲಿನ್ ಸಾಲಿಡಾರಿಟಿ ಸಂಯೋಜಕ ಮತ್ತು ಸಾಮಾಜಿಕ ಕಾರ್ಯಕರ್ತ ಏಂಜಲ್ ಗಾಡ್ಫ್ರೇ ಗೋಲ್ಡ್ ಸ್ಟೈನ್ ಹೇಳಿದ್ದಾರೆ.

ಶೇಖ್ ಜರ್ರಾದಲ್ಲಿನ ಅನೇಕ ಪ್ಯಾಲೇಸ್ಟಿನಿಯನ್ ಕುಟುಂಬಗಳು ಸಹ ಹೊರಹಾಕಲ್ಪಡುವ ಭೀತಿಯನ್ನು ಎದುರಿಸುತ್ತಿವೆ.

Share this on:
error: Content is protected !!