ಜೆರುಸಲೆಂ: ಕೆಲವು ದಿನಗಳ ಅಂತರದಲ್ಲಿ ಮತ್ತೆ ಗಝಾ ಪಟ್ಟಣದ ಮೇಲೆ ಇಸ್ರೇಲಿ ಶತ್ರುಗಳ ಬಾಂಬ್ ದಾಳಿ. ಗಝಾ ಸಿಟಿ ಮತ್ತು ಬೈತುರ್ರಾಹಿಯ ಸೇರಿ ಮುಂತಾದ ಸ್ಥಳಗಳ ಮೇಲೆ ಗುರುವಾರ ರಾತ್ರಿ ಆಕ್ರಮಣ ನಡೆಸಿದರು.
ನೂತನವಾಗಿ ರಚನೆಯಾದ ಇಸ್ರೇಲಿನ ಹೊಸ ಸರ್ಕಾರವು ಆಕ್ರಮಣಶೀಲತೆಯ ಹಾದಿಯಲ್ಲಿದೆ ಎಂದು ಈ ಸನ್ನಿವೇಶ ಸಾಬೀತುಪಡಿಸುತ್ತಿದೆ. ತನ್ನ ಸ್ವಂತ ಜನರನ್ನು ಮತ್ತು ಪವಿತ್ರ ತಾಣಗಳನ್ನು ರಕ್ಷಿಸಲು ಹೆಚ್ಚಿನ ಪ್ರಯತ್ನ ಮಾಡಲಿದೆ ಎಂದು ಹಮಾಸ್ ಅಲ್ಲಿನ ವಾರ್ತಾ ಹೇಳಿಕೆಯಲ್ಲಿ ತಿಳಿಸಿದೆ. ಗಝಾ ನಗರದ ಪಶ್ಚಿಮ ದಿಕ್ಕಿನಲ್ಲಿ ಒಂದು ಡ್ರೋನ್ ಉರುಳಿದೆ ಎಂದು ಹಮಾಸ್ ಒಡೆತನದ ಅಲ್-ಅಕ್ಸಾ ಟಿವಿ ವರದಿ ಮಾಡಿದೆ.
ಇಸ್ರೇಲ್ ವಿರುದ್ಧ ಹಮಾಸ್ ನೇತೃತ್ವ ದಾಳಿ ನಡೆದಿದೆ ವರದಿಗಳು ಬಂದಿವೆ.
ಹಮಾಸ್ನ ಮಿಲಿಟರಿ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ತೆಗೆದುಹಾಕುವವರೆಗೆ ಈ ದಾಳಿ ಮುಂದುವರಿಯುತ್ತದೆ ಮತ್ತು ಗಝಾದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ಹಮಾಸ್ ಕಾರಣ ಎಂದು ಇಸ್ರೇಲ್ ಮಿಲಿಟರಿ ವಾರ್ತಾ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು, ಗಝಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 66 ಮಕ್ಕಳು ಸೇರಿದಂತೆ 257 ಜನರು ಸಾವನ್ನಪ್ಪಿದ್ದರು. ಇಸ್ರೇಲ್ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದರು.