Latest Posts

SHIPWAVES DUBAI ಸಂಸ್ಥೆಗೆ ಹಾಗೂ ಅನಿವಾಸಿ ಉದ್ಯಮಿ ಜನಾಬ್ ಯೂಸುಫ್ ಈಶ್ವರಮಂಗಲ ಅವರಿಗೆ ಗೌರವಾರ್ಪಣೆ

ದುಬೈ : ಕೋವಿಡ್ ಎರಡನೇ ಅಲೆಯ ವಿರುದ್ಧ ಪ್ರಮುಖ ಪಾತ್ರ ವಹಿಸಿ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ತಾಯಿನಾಡಿಗೆ ಉಚಿತ ಕಾರ್ಗೊ ವ್ಯವಸ್ಥೆ ಏರ್ಪಡಿಸಿದ SHIPWAVES DUBAI ಸಿಪ್ಪಿಂಗ್ ಕಂಪೆನಿಗೆ ಹಾಗೂ DONATE OXYGEN AND SAVE LIVES ಅಭಿಯಾನಕ್ಕೆ ದೊಡ್ಡ ಮೊತ್ತದ ಸಹಾಯ ಮಾಡಿ ಅದರ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಅನಿವಾಸಿ ಯುವ ಉದ್ಯಮಿ ಜನಾಬ್ ಯೂಸುಫ್ ಈಶ್ವರಮಂಗಲ ಅವರ ನಿಶ್ವಾರ್ಥ ಸಹಕಾರವನ್ನು ಮನಗಂಡು, ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅತ್ಯಂತ ಉತ್ಸಾಹದಿಂದ ವಿಖಾಯ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ, ನಿಷ್ಕಳಂಕತೆಯ ಸಹಾಯ, ಸಹಕಾರದ ಮೂಲಕ ಮಾದರಿಯಾದ ಎಲ್ಲಾ ಧಾನಿಗಳ, ಸಮಿತಿಯ ಪದಾಧಿಕರಿಗಳ ಸೇವೆಗಳನ್ನು ಸರ್ವ ಶಕ್ತನಾದ ಅಲ್ಲಾಹನು ಖಬೂಲ್ ಮಾಡಲಿ , ಸಹಕರಿಸಿದ ಎಲ್ಲರಿಗೂ ಆರೋಗ್ಯವುಳ್ಳ , ದೀರ್ಘ ಆಯುಷ್ಯ ಕರುಣಿಸಲೀ ಮತ್ತು ಉದ್ಯೋಗ , ಉದ್ಯಮಗಳಲ್ಲಿ ಅಲ್ಲಾಹನು ಬರ್ಕತ್ ನೀಡಲಿ , ಆಮೀನ್.
SKSSF ವಿಖಾಯ ಕರ್ನಾಟಕ ಯುಎಇ ಸಮಿತಿ

Share this on:
error: Content is protected !!