Latest Posts

ಉತ್ತರ ಕೊರಿಯಾದಲ್ಲಿ ತೀವ್ರ ಆಹಾರ ಕೊರತೆ: ಬಾಳೆಹಣ್ಣಿಗೆ ಕೆ.ಜಿ.ಗೆ 3,300 ರೂ, ಕಾಫಿಗೆ 7,400 ರೂ.

ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿರುವುದರಿಂದ ಉತ್ತರ ಕೊರಿಯಾದಲ್ಲಿ ಆಹಾರದ ಕೊರತೆ ಉಲ್ಬಣಗೊಂಡಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ದೇಶದಲ್ಲಿ ಆಹಾರದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ

ಕಳೆದ ವರ್ಷದ ಚಂಡಮಾರುತವು ಭಾರಿ ಬೆಳೆ ಹಾನಿಯನ್ನುಂಟುಮಾಡಿತು ಮತ್ತು ಧಾನ್ಯ ಉತ್ಪಾದನೆಯನ್ನು ಅಡ್ಡಿಪಡಿಸಿತು, ಇದು ತೀವ್ರ ಆಹಾರದ ಕೊರತೆಗೆ ಕಾರಣವಾಗಿದೆ ಎಂದು ಕಿಮ್ ಹೇಳಿದ್ದಾರೆ.

ವರದಿಗಳ ಪ್ರಕಾರ, ಎಲ್ಲಾ ಪ್ರಮುಖ ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ. ಒಂದು ಕಿಲೋ ಬಾಳೆಹಣ್ಣಿನ ಬೆಲೆ 3300 ರೂ. ಒಂದು ಪ್ಯಾಕೆಟ್ ಚಹಾಕ್ಕೆ 70 ರೂ. ಮತ್ತು ಒಂದು ಪ್ಯಾಕೆಟ್ ಕಾಫಿಗೆ 7414 ರೂ. ಆಗಿದೆ

ದೇಶದ ತೀವ್ರ ಆಹಾರ ಕೊರತೆಯನ್ನು ನೀಗಿಸಲು ಪಕ್ಷದ ಕಾರ್ಯಕರ್ತರು ಮುಂದೆ ಬರಬೇಕು ಎಂದು ಕಿಂಗ್ ಹೇಳಿದರು. ಅದೇ ಸಮಯದಲ್ಲಿ ಕೋವಿಡ್ ಸನ್ನಿವೇಶದಲ್ಲಿ ಗಡಿಗಳನ್ನು ಮುಚ್ಚಿರುವುದರಿಂದ ಸಮಸ್ಯೆಯನ್ನು ಹೇಗೆ ಪರಿಹರಿಸಲಾಗುವುದು ಎಂಬುವುದು ಸ್ಪಷ್ಟವಾಗಿಲ್ಲ.

ಯುಎನ್ ಆಹಾರ ಮತ್ತು ಕೃಷಿ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಉತ್ತರ ಕೊರಿಯಾವು 860,000 ಟನ್ ಆಹಾರದ ಕೊರತೆಯಿದೆ. ದೇಶದಲ್ಲಿ ಒಂದೇ ಒಂದು ಕೋವಿಡ್ ಪ್ರಕರಣವನ್ನು ದೃಡಪಡಿಸಿಲ್ಲವಾದರೂ, ಗಡಿಗಳನ್ನು ಮುಚ್ಚಲಾಗಿದೆ ಮತ್ತು ಸ್ಥಳೀಯ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ದೇಶವು ಆಹಾರ ಸೇರಿದಂತೆ ಪ್ರಮುಖ ಆಹಾರಕ್ಕಾಗಿ ಚೀನಾವನ್ನು ಹೆಚ್ಚು ಅವಲಂಬಿಸಿದೆ.

Share this on:
error: Content is protected !!