Latest Posts

2022 ವಿಶ್ವಕಪ್ ಫುಟ್ಬಾಲ್; ಪ್ರೇಕ್ಷಕರಿಗೆ ಒಂದು ಮಿಲಿಯನ್ ಕೋವಿಡ್ ಲಸಿಕೆ ತಯಾರಿಸಲಿರುವ ಕತ್ತರ್

‘ವಿಶ್ವಕಪ್‌ನಲ್ಲಿ ಭಾಗವಹಿಸುವ ಪ್ರೇಕ್ಷಕರ ಸುರಕ್ಷತೆಯನ್ನು ಖಾತರಿಪಡಿಸುವುದು ದೇಶದ ಜವಾಬ್ದಾರಿಯಾಗಿದೆ. ವಿಶ್ವಕಪ್ ಪ್ರೇಕ್ಷಕರಿಗೆ ಒಂದು ಮಿಲಿಯನ್ ಕೋವಿಡ್ ಲಸಿಕೆಗಳನ್ನು ತಯಾರಿಸಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಇದಕ್ಕಾಗಿ ವಿವಿಧ ಲಸಿಕೆ ಕಂಪನಿಗಳೊಂದಿಗೆ ಮಾತುಕತೆ ನಡೆಯುತ್ತಿದೆ” ಎಂದು ಕತಾರ್ ಪ್ರಧಾನಿ ಶೇಖ್ ಖಾಲಿದ್ ಬಿನ್ ಅಝೀಝ್ ಅಲ್ ಥಾನಿಯವರ ಹೇಳಿದ್ದಾರೆ.

ಆಯಾ ದೇಶಗಳಿಂದ ಲಸಿಕೆ ಪೂರ್ಣಗೊಳಿಸದವರಿಗೆ ಲಸಿಕೆ ಕತಾರ್‌ನಲ್ಲಿ ನೀಡಲಾಗುವುದು ಎಂದು ದಿ ಪೆನಿನ್ಸುಲಾ ಕತ್ತರ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಇನ್ನೇನು ಒಂದೂವರೆ ವರ್ಷಗಳು ಮಾತ್ರ ಬಾಕಿ ಇದ್ದು
‘ಕೋವಿಡ್ ಬಿಕ್ಕಟ್ಟಿನ ನಡುವೆಯೂ ವಿಶ್ವಕಪ್‌ಗಾಗಿ ಸಿದ್ಧತೆಗಳು ಅತಿ ವೇಗದಲ್ಲಿ ನಡೆಯುತ್ತಿದ್ದು, ದೇಶವು ಪಂದ್ಯಾವಳಿಯನ್ನು ಆಯೋಜಿಸಲು ಸಿದ್ಧವಾಗಿದೆ. ಫೈನಲ್ ನಡೆಯಲಿರುವ ಲುಸೈಲ್ ಕ್ರೀಡಾಂಗಣದ ನಿರ್ಮಾಣವು 90% ಪೂರ್ಣಗೊಂಡಿದೆ. ಈ ವರ್ಷದ ಕೊನೆಯಲ್ಲಿ ದೋಹಾದಲ್ಲಿ ನಡೆಯಲಿರುವ ಫಿಫಾ ಅರಬ್ ಕಪ್ ಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು.

Share this on:
error: Content is protected !!