Latest Posts

ದಾರುನ್ನೂರ್ ಯು ಎ ಇ ಇದರ 6 ನೇ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆ

ದುಬೈ : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ 6 ನೇ ವಾರ್ಷಿಕ ಮಹಾ ಸಭೆಯು ದಿನಾಂಕ 18/06/2021 ನೇ ಶುಕ್ರವಾರದಂದು ಅಪರಾಹ್ನ 2.30 ಕ್ಕೆ ಸರಿಯಾಗಿ ದೇರಾ ದುಬೈಯಲ್ಲಿರುವ ಓರಿಯಂಟಲ್ ಕಾರ್ನರ್ ಹೋಟೆಲ್ ನಲ್ಲಿ ಜನಾಬ್ ಸಂಶುದ್ದೀನ್ ಸೂರಲ್ಪಾಡಿ ಯವರ ಅದ್ಯಕ್ಷತೆಯಲ್ಲಿ ನೆರವೇರಿತು.

ವೇದಿಕೆಯಲ್ಲಿ ಉಸ್ತಾದ್ ಅಬ್ದುಲ್ ಸಲಾಂ ಬಾಖವಿ ಸಮಸ್ತ ಕೇಂದ್ರ ಮುಶಾವರ ಸದಸ್ಯರು ಮತ್ತು ಅದ್ಯಕ್ಷರು ದುಬೈ ಸುನ್ನಿ ಸೆಂಟರ್ , ದಾರುನ್ನೂರ್ ಉಪದೇಶಕ ಸಮಿತಿ ಸದಸ್ಯರುಗಳಾದ ಸಯ್ಯದ್ ಆಸ್ಕರ್ ಅಲಿ ತಂಗಳ್ , ಜನಾಬ್ ಸಂಶುದ್ದೀನ್ ಕಲ್ಕಾರ್ ,ಜನಾಬ್ ಮುಹಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ , ಜನಾಬ್ ಅಶ್ರಫ್ ಖಾನ್ ಮಾಂತೂರ್, ಗೌರವಾದ್ಯಕ್ಷರಾದ ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ, ಶಾರ್ಜಾ ಸ್ಟೇಟ್ ಸಮಿತಿ ಅದ್ಯಕ್ಷ ಜನಾಬ್ ಮಹಮ್ಮದ್ ಆಶ್ರಫ್ ಬಾಳೆ ಹಣ್ಣೂರ್ , ಉಪಾದ್ಯಕ್ಷರಾದ ಜನಾಬ್ ಮಹಮ್ಮದ್ ಮಾಡಾವು, ಧಾರ್ಮಿಕ ಸಲಹೆಗಾರರಾದ ಸುಲೈಮಾನ್ ಮೌಲವಿ ಕಲ್ಲೆಗ ಮೊದಲಾದವರು ಉಪಸ್ಥಿತರಿದ್ದರು.ದು ಆ ಕಾರ್ಯವನ್ನು ಉಸ್ತಾದ್ ಅಬ್ದುಲ್ ಸಲಾಮ್ ಬಾಖವಿ ಉಸ್ತಾದರು ನೆರವೇರಿಸಿದರು. ಸ್ವಾಗತವನ್ನು ದಾರುನ್ನೂರ್ ಯು ಎ ಇ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್ ಕೋರಿದರು.
ಕಾರ್ಯಕ್ರಮವನ್ನು ಅಲ್ಲಾಹನ ನಾಮದೊಂದಿಗೆ ಅಬ್ದುಲ್ ಸಲಾಂ ಬಾಖವಿ ಉಸ್ತಾದರು ಉದ್ಘಾಟಿಸಿದರು.ಈ ಸಂದರ್ಭ ಪ್ರವಾದಿಯವರ ಹಾದಿಯನ್ನು ಅನುಸರಿಸಲು ಬೇಕಾದ ನಿಷ್ಕಲ್ಮಶ ಮನೋಭಾವವನ್ನು ರೂಢಿಸಿ ಕೊಳ್ಳಲು ಕರೆಯಿತ್ತರು.ದಾರುನ್ನೂರಿನ ಶಿಲ್ಪಿ ಶೈಖುನಾ ತ್ವಾಕಾ ಉಸ್ತಾದ್ ರವರ ಅನಾರೋಗ್ಯ ಶಮನಕ್ಕಾಗಿ ಹಾಗೂ ದಾರುನ್ನೂರ್ ದುಬೈಸ್ಟೇಟ್ ಪ್ರೆಸಿಡೆಂಟ್ ರಫೀಕ್ ಆತೂರ್ ರವರ ಅನಾರೋಗ್ಯ ಶಮನಕ್ಕಾಗಿ ಪ್ರತ್ಯೇಕ ದು ಆ ಮಾಡಿದರು.
ಈ ಸಂದರ್ಭ ದಾರುನ್ನೂರ್ ಅದ್ಯಕ್ಷರು , ಗೌರವಾದ್ಯಕ್ಷರು ಮತ್ತು ಉಪದೇಶಕರಿಂದ ಉಸ್ತಾದ್ ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ದಾರುನ್ನೂರ್ ಯು ಎ ಇ ಯಲ್ಲಿ 2020 ರ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆ ಮತ್ತು ಉತ್ತಮ ಸಹಕಾರವನ್ನು ಪರಿಗಣಿಸಿ ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹಣ್ಣೂರ್ ರವರಿಗೆ ಉಸ್ತಾದ್ ರವರ ಮುಖಾಂತರ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅದೇ ರೀತಿಯಲ್ಲಿ ಸ್ಟೇಟ್ ಸಮಿತಿಗಳ ಕಾರ್ಯನಿರ್ವಹಣೆಯಲ್ಲಿ ಶಾರ್ಜಾ ಸ್ಟೇಟ್ ಪ್ರಥಮ , ದುಬೈ ಸ್ಟೇಟ್ ದ್ವಿತೀಯ ಮತ್ತು ಅಬುಧಾಬಿ ಸ್ಟೇಟ್ ತೃತೀಯ ಸ್ಥಾನಗಳನ್ನು ಪಡೆದಿದ್ದು ಉಸ್ತಾದ್ ರವರ ಮುಖಾಂತರ ಆಯಾ ಸ್ಟೇಟ್ ಪ್ರಮುಖರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ವಾರ್ಷಿಕ ವರದಿಯಯನ್ನು ಕಾರ್ಯದರ್ಶಿ ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ ರವರು ವಾಚಿಸಿದರು.
ವಾರ್ಷಿಕ ಆಯವ್ಯಯಗಳ ಲೆಕ್ಕವನ್ನು ಲೆಕ್ಕ ಪರಿಶೋಧಕ ಜನಾಬ್ ಅನ್ಸಾಫ್ ಪಾತೂರ್ ರವರು ಮಂಡಿಸಿದರು. ಬಳಿಕ ವರದಿ ಮತ್ತು ಲೆಕ್ಕ ಪತ್ರವನ್ನು ಅದ್ಯಕ್ಷರಾದ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರು ಅವಲೋಕಿಸಿ ವಿವರಣೆ ನೀಡಿದರು.

ಬಳಿಕ ವೇದಿಕೆಯಲ್ಲಿರುವ ಗಣ್ಯರಿಂದ ಹಿತವಚನ ಕಾರ್ಯಕ್ರಮದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಗಳ್ , ಜನಾಬ್ ಸಂಶುದ್ದೀನ್ ಕಲ್ಕಾರ್ , ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ , ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹಣ್ಣೂರ್ , ಜನಾಬ್ ಅಶ್ರಫ್ ಖಾನ್ ಮಾಂತೂರ್ , ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ, ಜನಾಬ್ ಮಹಮ್ಮದ್ ಮಾಡಾವು, ಜನಾಬ್ ಮುಹಿಯ್ಯಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ ಮೊದಲಾದವರು ದಾರುನ್ನೂರ್ ನೀಡುವ ವಿದ್ಯಾಭ್ಯಾಸದ ಗುಣಮಟ್ಟ ಮತ್ತು ಕಾರ್ಯವೈಖರಿಯನ್ನು ಮನಸಾರೆ ಹೊಗಳಿ , ಜೀವನದಲ್ಲಿ ಆದರ್ಶತೆಯನ್ನು ಪಾಲಿಸಲು ಉಪದೇಶ ನೀಡಿದರು.

2020 ನೇ ಸಾಲಿನ ಸಮಿತಿಯ ವಿಸರ್ಜನೆ ಮಾಡುತ್ತಾ ಅದ್ಯಕ್ಷರಾದ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರು ಕಳೆದ ಅವಧಿಯಲ್ಲಿ ಕೋವಿಡ್ ಮಹಾಮಾರಿಯ ಭೀಕರ ಆಕ್ರಮಣದಿಂದ ವಿದ್ಯಾಭ್ಯಾಸ ಕೇಂದ್ರಗಳು ಮತ್ತು ಸಂಘ ಸಂಸ್ಥೆಗಳು ತಟಸ್ಥಗೊಂಡಿದ್ದು ತುಂಬಾ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗಿ ಬಂತು. ಹಾಗಿದ್ದೂ ದಾನಿಗಳ ನೆರವಿನಿಂದ ಮತ್ತು ದಾರುನ್ನೂರ್ ಕಾರ್ಯಕರ್ತರ ಅವಿರತ ಪರಿಶ್ರಮದಿಂದ ಹಿಂದಿನ ಮಟ್ಟವನ್ನು ಕಾಯ್ದುಕೊಳ್ಳಲು ಸಾದ್ಯವಾಗಿದ್ದು ಅಲ್ಲಾಹನ ಅಪಾರವಾದ ಅನುಗ್ರಹ ಎಂದು ಹೇಳುತ್ತಾ ನೂತನ ಸಮಿತಿಗೆ ಶುಭ ಹಾರೈಸಿ ಮಾತಿಗೆ ಪೂರ್ಣವಿರಾಮವನ್ನಿತ್ತರು.

ಬಳಿಕ ಪ್ರಧಾನ ಕಾರ್ಯದರ್ಶಿಯಾಗಿದ್ದ ಜನಾಬ್ ಬದ್ರುದ್ದೀನ್ ಹೆಂತಾರ್ ಮತ್ತು ಕೋಶಾಧಿಕಾರಿಯಾಗಿದ್ದ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆಯವರು ತಮ್ಮ ತಮ್ಮ ಅನಿಸಿಕೆಯನ್ನು ಮಂಡಿಸಿ ಸೂತನ ಸಮಿತಿಗೆ ಶುಭ ಹಾರೈಸಿದರು.

Share this on:
error: Content is protected !!