Latest Posts

ಒಂದೂವರೆ ವರ್ಷದ ನಂತರ ತೆರೆದ ದುಬೈ ವಿಮಾನ ನಿಲ್ದಾಣದ ಟರ್ಮಿನಲ್ ಒನ್

ಯುಎಇ: ಜಗತ್ತಿನ ಪ್ರಮುಖ ವಿಮಾನ ನಿಲ್ದಾಣ ಮತ್ತು ಅತ್ಯಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ದುಬೈ ವಿಮಾನ ನಿಲ್ದಾಣದ ಟರ್ಮಿನಲ್ ಒನ್ ಸುಮಾರು ಒಂದೂವರೆ ವರ್ಷದ ನಂತರ ತೆರೆದಿದೆ.ಕೋವಿಡ್ ನಿಂದಾಗಿ ಕಳೆದ ಮಾರ್ಚ್‌ನಲ್ಲಿ ಟರ್ಮಿನಲ್ ಮುಚ್ಚಲಾಗಿತ್ತು.

ಮುಚ್ಚಿದ ಬರೊಬ್ಬರಿ 15 ತಿಂಗಳ ನಂತರ, ವಿಶ್ವ ದರ್ಜೆಯ ಟರ್ಮಿನಲ್ ಮತ್ತೆ ಪ್ರಯಾಣಿಕರನ್ನು ಸ್ವಾಗತಿಸು ಮುಂದಾಗಿದೆ.ರಿಯಾದ್‌ನ flynas ವಿಮಾನ ಮೊದಲ ಪ್ರಯಾಣವನ್ನು ನಡೆಸಿದೆ.ಈ ಹಿಂದೆ ಸೇವೆಯನ್ನು ನಿರ್ವಹಿಸಿದ ಸುಮಾರು 65 ವಿಮಾನಯಾನ ಸಂಸ್ಥೆಗಳು ಟರ್ಮಿನಲ್‌ಗೆ ಮತ್ತೆ ಮರಳುವುದಾಗಿ ತಿಳಿಸಿವೆ.

ಏರ್ ಇಂಡಿಯಾ ವಿಮಾನಗಳು ಈಗ ಟರ್ಮಿನಲ್ ಒನ್ ನಿಂದ ಹಾರಾಟ ನಡೆಸಲಿದ್ದು,ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಟರ್ಮಿನಲ್ 2 ರಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ. ಸ್ಪೈಸ್‌ಜೆಟ್ ಮತ್ತು ಇಂಡಿಗೊ ಸೇರಿದಂತೆ ಇತರ ವಿಮಾನಗಳು ಟರ್ಮಿನಲ್ ಒನ್‌ನಿಂದ ಹಾರಾಟ ನಡೆಸಲಿದೆ.

ತಾತ್ಕಾಲಿಕವಾಗಿ ಟರ್ಮಿನಲ್ ಎರಡು ಮತ್ತು ಮೂರು ಕ್ಕೆ ಸ್ಥಳಾಂತರಗೊಂಡ ಅನೇಕ ವಿಮಾನಗಳು ಕ್ರಮೇಣ ಟರ್ಮಿನಲ್ ಒನ್‌ಗೆ ಮರಳುತ್ತವೆ. ಟರ್ಮಿನಲ್ ಒನ್‌ನಲ್ಲಿ ಡ್ಯೂಟಿ ಫ್ರೀ ಅಂಗಡಿ ಕೂಡ ಮತ್ತೆ ಪ್ರಾರಂಭವಾಗಿದೆ.

ದುಬೈನ ಟರ್ಮಿನಲ್ ಒನ್ ವಿಶ್ವದ ಪ್ರಮುಖ ವಿಮಾನ ನಿಲ್ದಾಣ ಟರ್ಮಿನಲ್ಗಳಲ್ಲಿ ಒಂದಾಗಿದೆ,ವರ್ಷಕ್ಕೆ 180 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿದೆ.

Share this on:
error: Content is protected !!