Latest Posts

43 ಕೋವಿಡ್ ಟೆಸ್ಟ್ ನಲ್ಲೂ ಪೋಸಿಟಿವ್
305 ದಿನಗಳ ನಂತರ ಕೊರೋನಾ ಗೆದ್ದು ಬಂದ ಬ್ರಿಟಿಷ್ ಪ್ರಜೆ

ದೀರ್ಘಕಾಲದ ಸೋಂಕು ದೃಢೀಕರಿಸಿದ ದಾಖಲೆ

ಕೋವಿಡ್ ಸೋಂಕಿತ 72 ವರ್ಷದ ಬ್ರಿಟಿಷ್ ಪ್ರಜೆ 305 ದಿನಗಳ ನಂತರ ರೋಗ ಮುಕ್ತಿ ಗೊಂಡಿದ್ದಾನೆ. ಹತ್ತನೇ ತಿಂಗಳು ನಡೆಸಿದ ಪರೀಕ್ಷೆಯಲ್ಲೂ ಪೋಸಿಟಿವ್ ರಿಪೋರ್ಟ್ ತೋರಿಸಲಾಗಿತ್ತು . ಈತನನ್ನು ಸುಮಾರು 43 ಬಾರಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅತೀ ಹೆಚ್ಚು ಕಾಲ ಕೊರೋನಾದೊಂದಿಗೆ ಹೋರಾಡಿದ ಕೀರ್ತಿ ಈತನಿಗೆ ಸಲ್ಲುತ್ತದೆ.

ವೆಸ್ಟರ್ನ್ ಇಂಗ್ಲೆಂಡ್‌ನ ಬ್ರಿಸ್ಟಲ್ ಮೂಲದ ಡೇವ್ ಸ್ಮಿತ್‌ಗೆ 10 ತಿಂಗಳಿನಿಂದ ರೋಗ ಪತ್ತೆಯಾಗಿದೆ. ಎಲ್ಲಾ ಪರೀಕ್ಷೆಗಳಲ್ಲಿ ಕೋವಿಡ್ ಪೋಸಿಟಿವ್ , ಗಂಭೀರ ಸ್ಥಿತಿಯಲ್ಲಿದ್ಧ ಆತನನ್ನು ಏಳು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ಹೇಳುತ್ತಾರೆ.

ಆತನ ಪತ್ನಿ ಲಿಂಡಾ ಕೂಡ ಕ್ವಾರಂಟೈನಲ್ಲಿದ್ದಳು . ಅವನು ಬದುಕುಳಿಯುತ್ತಾನೆ ಎಂದು ಭಾವಿಸಿರಲಿಲ್ಲ ಎಂದು ಆತನ ಪತ್ನಿ ಹೇಳುತ್ತಾಳೆ.
ಅತನ ದೇಹದಲ್ಲಿ ವೈರಸ್ ಯಾವಾಗಲೂ ಇರುತ್ತದೆ ಎಂದು ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಲಹೆಗಾರ ಎಡ್ ಮೊರನ್ ಹೇಳುತ್ತಾರೆ.

ವೈದ್ಯರು ಆತನ ಮೇಲೆ ಅನೇಕ ಔಷಧಿಗಳನ್ನು ಪ್ರಯತ್ನಿಸಿದರೂ ಆದರೆ ಅವುಗಳಲ್ಲಿ ಯಾವುದೂ ಪ್ರಯೋಜನವಾಗಲಿಲ್ಲ, 305 ದಿನಗಳ ನಂತರ, ಕೋವಿಡ್ ಪರೀಕ್ಷಾ ಫಲಿತಾಂಶವು ನೆಗಟಿವ್ ರಿಪೋರ್ಟ್ ತೋರಿಸಲಾಗಿತ್ತು

Share this on:
error: Content is protected !!