Latest Posts

ಒಮಾನ್ – ಭಾರತದಿಂದ ಬರುವ ವಿಮಾನಯಾನಗಳ ನಿರ್ಬಂಧ ಮುಂದುವರಿಕೆ.

ಏರಿಕೆ ಕಾಣುತ್ತಿರುವ ಕೋವಿಡ್ ಕೇಸ್ ಗಳ ಕಾರಣದಿಂದಾಗಿ ಒಮನ್ ಏಪ್ರಿಲ್ ನಲ್ಲಿ ವಿಮಾನಯಾನವನ್ನು ನಿರ್ಬಂಧಿಸಿತ್ತು.ಇತರ ರಾಷ್ಟ್ರಗಳು ಕೂಡ ವಿಮಾನಯಾನ ರದ್ದುಗೊಳಿಸಿದ್ದು ತುರ್ತು ಉದ್ದೇಶಗಳಿಗಾಗಿ ಮತ್ತು ರಜೆಯ ಮೇರೆಗೆ ತಾಯ್ನಾಡಿಗೆ ಪಯಣಿಸಿರುವ ಅನಿವಾಸಿ ಭಾರತೀಯ ಉಧ್ಯೋಗಿಗಳು ವಿಮಾನಯಾನ ಪುನಾರಂಭಗೊಳ್ಳುವುದಕ್ಕಾಗಿ ಕಾಯುತಿದ್ದಾರೆ.

ಮಸ್ಕತ್ : ಭಾರತದಿಂದ ವಿಮಾನಯಾನಗಳ ನಿರ್ಬಂದವು ಮುಂದೂಡಲಾಗಿದೆ ಎಂದು ಒಮಾನ್ ಸಿವಿಲ್ ಹೇವಿಏಷನ್ ಅತಾರಿಟಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಅಧಿಕೃತ ಘೋಷಣೆ ಬರುವವರೆಗೆ ನಿರ್ಬಂಧವು ಮುಂದುವರಿಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಮಾನ್ ನಿಂದ ಭಾರತಕ್ಕೆ ಪ್ರಯಾಣಿಸಲು ಒಮಾನ್ ಏರ್,ಸಲಾಂ ಏರ್, ಏರ್ ಇಂಡಿಯಾ,ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಶೇಷ ವಿಮಾನ ಸೇವೆ ನೀಡಲಾಗುತ್ತಿದೆ.

ಕಳೆದವಾರ ಸುಪ್ರೀಂ ಕಮಿಟಿಯ ಪತ್ರಿಕಾಗೋಷ್ಠಿಯಲ್ಲಿ ಭಾರತದಿಂದ ಒಮಾನ್ ಗೆ ವಿಮಾನಯಾನ ಸಂಚಾರ ಪುನರಾರಂಭಗೊಳಿಸುವುದರ ಬಗ್ಗೆ ನಿಲುವು ವ್ಯೆಕ್ತಪಡಿಸಿತ್ತು.

ಒಮಾನ್ ಹಾಗೂ ಭಾರತದ ನಡುವೆ ವಿಮಾನಯಾನಗಳಲ್ಲಿ ಭಾರತದಿಂದ ಒಮಾನಿನ ಪ್ರಜೆಗಳನ್ನು ಹಾಗೂ ಒಮಾನ್ ನಿಂದ ಭಾರತದ ಪ್ರಜೆಗಳನ್ನು ಹಾಗೂ ಕಾರ್ಗೋ,ವೈದ್ಯಕೀಯ ಉಧ್ಯೋಗಿಗಳನ್ನು ಕಳುಹಿಸಲು ಸುಲಭವಾಗುವಂತೆ ಮಾತ್ರ ಪರಿಮಿತಿಗೊಳಿಸಲಾಗಿದೆ ಎಂದು ನಾಗರೀಕ ವಿಮಾನಯಾನ ಪ್ರಾಧಿಕಾರದ ಉಸ್ತುವಾರಿ ,ಸಾರಿಗೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉಪ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

Share this on:
error: Content is protected !!