ಉಷ್ಣ ತರಂಗ ತೀವ್ರಗೊಳ್ಳುತ್ತಿದ್ದಂತೆ ಪಶ್ಚಿಮ ಕೆನಡಾದಲ್ಲಿ ಸಾವಿನ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಮಾತ್ರ ಒಂದು ವಾರದಲ್ಲಿ 719 ಜನರು ಸಾವನ್ನಪ್ಪಿದ್ದಾರೆ.
ಉಷ್ಣತೆಯಿಂದಾಗಿ ಅನೇಕ ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ಬೆಂಕಿಗಳು ಕಾಣಿಸಿಕೊಂಡಿದೆ. ಕಳೆದ ಕೆಲವು ದಿನಗಳಲ್ಲಿ ಸುಮಾರು 130 ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗಳು ನಡೆದಿವೆ. ಪ್ರಾಂತ್ಯದ ಲಿಟ್ಟನ್ ನಗರವು ಸಾವಿರ ವರ್ಷಗಳಲ್ಲಿ ಅತ್ಯಂತ ಕೆಟ್ಟ ಉಷ್ಣಾಂಶ ದಾಖಲಿಸಿದೆ. ಲಿಟ್ಟನ್ನಲ್ಲಿ ಹಿಂದಿನ ದಿನದ ತಾಪಮಾನ 49.6 ಡಿಗ್ರಿ ಆಗಿತ್ತು
ಮಾತ್ರವಲ್ಲದೇ, ನಿರಂತರವಾಗಿ ಸಂಭವಿಸುವ ಗುಡುಗು ಸಹಿತ ಮಿಂಚು ಬೆಂಕಿ ಕಾಣಿಸಲು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಿಟಿಷ್ ಕೊಲಂಬಿಯಾದಲ್ಲಿ 12,000 ಕ್ಕೂ ಹೆಚ್ಚು ಗುಡುಗು ಸಹಿತ ಮಳೆಯಾಗಿದೆ. ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ತುರ್ತು ಸಭೆ ಕರೆದು ವಿಷಯದ ಬಗ್ಗೆ ಚರ್ಚಿಸಿದ್ದಾರೆ